ಡ್ರಗ್ ಸೇವನೆ ಆರೋಪ; ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಟೆನಿಸ್ ತಾರೆ ನಡಾಲ್

ಪ್ರದರ್ಶನ ವೃದ್ಧಿಸುವ ಡ್ರಗ್ ಸೇವನೆ ಮಾಡಿದ್ದಾಗಿ ತಮ್ಮ ವಿರುದ್ಧ ಆರೋಪ ಮಾಡಿದ್ದ ಫ್ರಾನ್ಸ್ ಮಾಜಿ ಕ್ರೀಡಾ ಸಚಿವ ರೋಸ್ಲಿನ್ ಬ್ಯಾಕೆಲಾಟ್ ವಿರುದ್ಧ ಕಾನೂನ ಸಮರ ಹೂಡುವುದಾಗಿ ಸ್ಪೇನ್ ಟೆನಿಸ್ ತಾರೆ
ಟೆನಿಸ್ ತಾರೆ ರಫಾಲ್ ನಡಾಲ್
ಟೆನಿಸ್ ತಾರೆ ರಫಾಲ್ ನಡಾಲ್

ಮ್ಯಾಡ್ರಿಡ್: ಪ್ರದರ್ಶನ ವೃದ್ಧಿಸುವ ಡ್ರಗ್ ಸೇವನೆ ಮಾಡಿದ್ದಾಗಿ ತಮ್ಮ ವಿರುದ್ಧ ಆರೋಪ ಮಾಡಿದ್ದ ಫ್ರಾನ್ಸ್ ಮಾಜಿ ಕ್ರೀಡಾ ಸಚಿವ ರೋಸ್ಲಿನ್ ಬ್ಯಾಕೆಲಾಟ್ ವಿರುದ್ಧ ಕಾನೂನ ಸಮರ ಹೂಡುವುದಾಗಿ ಸ್ಪೇನ್ ಟೆನಿಸ್ ತಾರೆ ರಫಾಲ್ ನಡಾಲ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಾರ್ಸಿಲೋನಾದ ಟಾರ್ನಿಯೋ ಡೆಲ್ ಗಾಡೊ ಸರಣಿಯನ್ನು ಒಂಭತ್ತನೇ ಬಾರಿಗೆ ಗೆದ್ದ ನಂತರ ನಡಾಲ್ ಈ ಹೇಳಿಕೆ ನೀಡಿದ್ದಾರೆ.

"ಪ್ಯಾರಿಸ್ ಲಾ ಕೋರ್ಟ್ ನಲ್ಲಿ ಏಪ್ರಿಲ್ ೨೫ ರಂದು ರೋಸ್ಲಿನ್ ಬ್ಯಾಕೆಲಾಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಸಾರ್ವಜನಿಕವಾಗಿ ಇಂದು ತಿಳಿಸುತ್ತಿದ್ದೇನೆ. ಫ್ರೆಂಚ್ ವಾಹಿನಿಯೊಂದರಲ್ಲಿ ಮಾರ್ಚ್ ನಲ್ಲಿ ಸುಳ್ಳು ಆರೋಪ ಮಾಡಿದ್ದಕ್ಕೆ ಈ ಕ್ರಮ ತೆಗೆದುಕೊಂಡಿದ್ದೇನೆ" ಎಂದು ನಡಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಆಸ್ಟ್ರೇಲಿಯಾ ಓಪನ್ ನಲ್ಲಿ ನಿಷೇಧಿತ ಡ್ರಗ್ ಸೇವನೆ ಮಾಡಿದ್ದಕ್ಕೆ ಟೆನಿಸ್ ತಾರೆ ಮಾರಿಯಾ ಶರಪೋವಾ ಹೊರ ಬಿದ್ದ ಹಿನ್ನಲೆಯಲ್ಲಿ, ೧೨ ತಿಂಗಳುಗಳಿಂದ ವಿರಾಮ ತೆಗೆದುಕೊಂಡಿದ್ದ ನಡಾಲ್ ಅವರ ವಿರುದ್ಧವೂ ಇಂತಹುದೇ ಆರೋಪವನ್ನು ಬ್ಯಾಕೆಲಾಟ್ ಮಾಡಿದ್ದರು. "ಅವರು ಡ್ರಗ್ ಸೇವನೆ ಮಾಡಿರುವುದಲ್ಲಿ ಸಂದೇಹವೇ ಇಲ್ಲ. ಯಾವುದೇ ಟೆನಿಸ್ ಆಟಗಾರ ಇಷ್ಟು ದೀರ್ಘ ವಿರಾಮ ತೆಗೆದುಕೊಳ್ಳುವುದನ್ನು ನೀವು ನೋಡಿದ್ದೀರಾ? ಅವರು ಸಿಕ್ಕಿಹಾಕಿಕೊಂಡಿರುವುದನ್ನು ಮುಚ್ಚಿಹಾಕಲು ಹೀಗೆ ಮಾಡಲಾಗಿದೆ" ಎಂದಿದ್ದರು.

ಈ ಮೊಕದ್ದಮೆ ಗೆದ್ದರೆ ಪರಿಹಾರವನ್ನು ಫ್ರಾನ್ಸ್ ಮೂಲದ ಚ್ಯಾರಿಟಿಗೆ ದೇಣಿಗೆ ನೀಡುವುದಾಗಿ ನಡಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com