
ಲಂಡನ್: ಸತತ ನಾಲ್ಕು ಪಂದ್ಯಗಳ ಗೆಲುವಿನ ಸಂತಸದಲ್ಲಿರುವ ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ 5ನೇ ವೃತ್ತಿಪರ ಬ್ಯಾಕಿಂಗ್ ನಲ್ಲೂ ಫ್ರಾನ್ಸ್ ನ ಅನುಭವಿ ಫೈಟರ್ ಮಾಟಿಯಾಜ್ ರಾಯಲ್ ಗೆ ನಾಕೌಟ್ ಪಂಚ್ ನೀಡುವರೆ ಕಾದು ನೋಡಬೇಕಿದೆ.
ಭರ್ಜರಿ ಫಾರ್ಮ್ ನಲ್ಲಿರುವ ವಿಜೇಂದರ್ ಸಿಂಗ್ ಸ್ಟ್ರಾಟ್‌ಫರ್ಡ್ಸ್ ಕಾಪರ್ ಬಾಕ್ಸ್ ಅರೇನಾದಲ್ಲಿ ಸೂಪರ್ ಮಿಡಲ್‌ವೇಟ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಮಾಟಿಯಾಗ್ ರಾಯರ್ ಈಗಾಗಲೇ 44 ಪಂದ್ಯಗಳನ್ನಾಡಿ ಪಳಗಿದ್ದು ಹೆಚ್ಚು ಪ್ರತಿಸ್ಪರ್ಧೆ ನೀಡುವುದು ಖಚಿತ. ರಿಂಗ್ ನಲ್ಲಿ ವಿಜೇಂದರ್ ಆಡಿರುವುದು ಒಟ್ಟು 9 ಸುತ್ತುಗಳಾಗಿದ್ದರೆ, ರಾಯರ್ ಇದುವರೆಗೆ ಬರೋಬ್ಬರಿ 250 ಸುತ್ತುಗಳಲ್ಲಿ ಹೋರಾಟ ನೀಡೆಸಿದ ಅನುಭವವಿದೆ.
ಲಂಡನ್ ನಲ್ಲಿ ಇದು ನನ್ನ ಮೊದಲ ಫೈಟ್. ನನ್ನ ಸ್ಫೋಟಕ ಸಾಮರ್ಥ್ಯ ವನ್ನು ಲಂಡನ್ ಜನತೆಗೆ ತೋರ್ಪಡಿಸಲು ಕಾತರದಿಂದ ಕಾಯುತ್ತಿದ್ದೇನೆ. ಮಾಟಿಯಾಜ್ ಉತ್ತಮ ಫೈಟರ್. ಈ ಹಿಂದಿನ ಬಾಕ್ಸರ್‌ಗಳಷ್ಟು ಸುಲಭ ಎದುರಾಳಿಯಂತೆ ಕಾಣಿಸುತ್ತಿಲ್ಲ. ಆದರೆ ಇದು ಈ ಹಿಂದಿ ಫೈಟ್‌ಗಿಂತ ಸುದೀರ್ಘವಾಗಿ ಸಾಗಬಹುದು ಎಂದು ವಿಜಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement