ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಖಚಿತ: ರಿಯೋ ಒಲಂಪಿಕ್ಸ್ ನಿಂದ ಇಂದರ್ ಜೀತ್ ಔಟ್

ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಸ್ಪಷ್ಟವಾಗಿದ್ದು, ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ನುಚ್ಚು ನೂರಾಗಿದೆ.
ಇಂದರ್ ಜೀತ್
ಇಂದರ್ ಜೀತ್

ನವದೆಹಲಿ: ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಸ್ಪಷ್ಟವಾಗಿದ್ದು, ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ನುಚ್ಚು ನೂರಾಗಿದೆ.

ಜೂ. 29 ರಂದು ನಡೆಸಲಾಗಿದ್ದ ಎ ಸ್ಯಾಂಪಲ್ ಟೆಸ್ಟ್ ನಲ್ಲಿ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿವುದು ಖಚಿತವಾಗಿತ್ತು, ಆದರೆ ಈಗ ಬಿ ಸ್ಯಾಂಪಲ್ ಟೆಸ್ಟ್ ನ ವರದಿಯಲ್ಲಿ ಎ ಸ್ಯಾಂಪಲ್ ಟೆಸ್ಟ್ ಗಿಂತ ಭಿನ್ನವಾದ ವರದಿ ಬಂದಿದ್ದಿದ್ದರೆ ಇಂದರ್ ಜೀತ್ ಗೆ ರಿಯೋ ಒಲಂಪಿಕ್ಸ್ ನಲ್ಲಿ ಆಡುವ ಅವಕಾಶ ಇರುತ್ತಿತ್ತು. ಆದರೆ ಈಗ ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಒಲಂಪಿಕ್ಸ್ ನಲ್ಲಿ ಆಡುವುದಕ್ಕೆ ಸಾಧ್ಯವಿಲ್ಲ.

ರಾಷ್ಟ್ರೀಯ ಆ್ಯಂಟಿ ಡೋಪಿಂಗ್ ಏಜೆನ್ಸಿ( ನಾಡಾ)ದಿಂದ ಇಂದರ್ ಜೀತ್ ಗೆ ಎರಡು ಬಾರಿ ನೋಟಿಸ್ ಜಾರಿಯಾಗಿದ್ದು, ವಿಚಾರಣೆಗಾಗಿ ನಾಡಾದ ಶಿಸ್ತು ಸಮಿತಿಯ ಎದುರು ಇಂದರ್ ಜೀತ್ ಹಾಜರಾಗಬೇಕಾಗುತ್ತದೆ. ಎ ಸ್ಯಾಂಪಲ್ ಟೆಸ್ಟ್ ಬಳಿಕ ನಾಡಾ ಇಂದರ್ ಜೀತ್ ಅವರನ್ನು ಬಿ ಸ್ಯಾಂಪಲ್ ಟೆಸ್ಟ್ ಆಯ್ಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಎ ಸ್ಯಾಂಪಲ್ ಟೆಸ್ಟ್ ನಡೆಸಿದ 7 ದಿನಗಳಲ್ಲಿ ಬಿ ಸ್ಯಾಂಪಲ್ ಟೆಸ್ಟ್ ನಡೆಸಲಾಗಿದೆ. ಈ ಹಿಂದೆ ಪರೀಕ್ಷೆ ನಡೆಸಿದ್ದಾಗ ಉದ್ದೀಪನ ಮದ್ದು ಸೇವನೆ ಖಚಿತಪಡಿಸುವ ಪರೀಕ್ಷೆಯಲ್ಲಿ ಸ್ಯಾಂಪಲ್ ಗಳನ್ನು ಬದಲಾವಣೆ ಮಾಡಿ ತನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಇಂದರ್ ಜೀತ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com