ವಿರ್ಜಿನಿಯಾ
ಕ್ರೀಡೆ
ರಿಯೋ ಒಲಿಂಪಿಕ್ಸ್ ನಲ್ಲಿ ಅಮೆರಿಕಕ್ಕೆ ಮೊದಲ ಚಿನ್ನ
ರಿಯೋ ಒಲಿಂಪಿಕ್ಸ್ ನ ಮೊದಲ ಸ್ವರ್ಣವನ್ನು ಅಮೆರಿಕದ 19 ವರ್ಷದ ವಿರ್ಜಿನಿಯಾ ಜಿನ್ನಿ ಥ್ರಾಶರ್ ಗಳಿಸಿಕೊಂಡಿದ್ದಾರೆ...
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನ ಮೊದಲ ಸ್ವರ್ಣವನ್ನು ಅಮೆರಿಕದ 19 ವರ್ಷದ ವಿರ್ಜಿನಿಯಾ ಜಿನ್ನಿ ಥ್ರಾಶರ್ ಗಳಿಸಿಕೊಂಡಿದ್ದಾರೆ.
ಮಹಿಳೆಯರ 10 ಮೀ. ಏರ್ ರೈಫಲ್ ನಲ್ಲಿ ಚೀನಾದ ಹಾಲಿ ಚಾಂಪಿಯನ್ ಯಿ ಸಿಲಿಂಗ್ ಹಾಗೂ 2004ರ ಅಥೆನ್ಸ್ ಒಲಿಂಪಿಕ್ಸ್ ಚಾಂಪಿಯನ್ ಡು ಲಿಯನ್ನು ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನ್ಯಾಷನಲ್ ಶೂಟಿಂಗ್ ಸೆಂಟರ್ ನಲ್ಲಿ ನಡೆದ ರೋಚಕ ಸ್ಫರ್ಧೆಯಲ್ಲಿ ಅರ್ಹತಾ ಸುತ್ತಿನಲ್ಲಿ 416.3 ಅಂಕದೊಂದಿಗೆ 6ನೇ ಸ್ಥಾನಿಯಾಗಿ ಫೈನಲ್ ಗೇರಿದ್ದ ವಿರ್ಜಿನಿಯಾ. ಅಂತಿಮ ಹೋರಾಟದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ