ಮಹಿಳಾ ಜಿಮ್ನಾಸ್ಟಿಕ್ : ದೀಪಾ ಕರ್ಮಕರ್ ಫೈನಲ್ ಪ್ರವೇಶ

ಭಾರತದ ಜಿಮ್ನಾಸ್ಟಿಕ್(ವ್ಯಾಯಾಮ ಪಟು) ದೀಪಾ ಕರ್ಮಕರ್ ಇತಿಹಾಸ ಸೃಷ್ಟಿಸಿದ್ದು ತಮ್ಮ ಮೊದಲ ಒಲಿಂಪಿಕ್ ಗೇಮ್ ನಲ್ಲಿ...
ಭಾರತದ ಮಹಿಳಾ ಜಿಮ್ನಾಸ್ಟಿಕ್  ದೀಪಾ ಕರ್ಮಕರ್ ನಿನ್ನೆ ರಿಯೊ ಡಿ ಜನೈರೊದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಪ್ರದರ್ಶನ ನೀಡುತ್ತಿರುವುದು.
ಭಾರತದ ಮಹಿಳಾ ಜಿಮ್ನಾಸ್ಟಿಕ್ ದೀಪಾ ಕರ್ಮಕರ್ ನಿನ್ನೆ ರಿಯೊ ಡಿ ಜನೈರೊದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಪ್ರದರ್ಶನ ನೀಡುತ್ತಿರುವುದು.
ರಿಯೊ ಡಿ ಜನೈರೊ: ಭಾರತದ ಜಿಮ್ನಾಸ್ಟಿಕ್ (ವ್ಯಾಯಾಮ ಪಟು) ದೀಪಾ ಕರ್ಮಕರ್ ಇತಿಹಾಸ ಸೃಷ್ಟಿಸಿದ್ದು ತಮ್ಮ ಮೊದಲ ಒಲಿಂಪಿಕ್ ಗೇಮ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ 8ನೆಯವರಾಗಿ ಪಂದ್ಯ ಮುಗಿಸಿದರು.
ತ್ರಿಪುರಾ ಮೂಲದ ದೀಪಾ ಕರ್ಮಕರ್ ಒಲಿಂಪಿಕ್ಸ್ ಅರ್ಹತಾ ಸುತ್ತು ಪ್ರವೇಶಿಸಿದ ಮೊದಲ ಮಹಿಳಾ ಜಿಮ್ನಾಸ್ಟಿಕ್  ಆಗಿದ್ದಾರೆ. ಅವರು ತಮ್ಮ ಪ್ರೊದುನೊವ ವಾಲ್ಟ್ ಶೈಲಿಯಲ್ಲಿ ಎರಡು ಪ್ರಯತ್ನಗಳ ನಂತರ 14.850 ಅಂಕಗಳ ಮೂಲಕ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದಾರೆ.
ತೀವ್ರ ಪೈಪೋಟಿ ಎದುರಿಸಿದ್ದ ದೀಪಾ ಕರ್ಮಕರ್ ಕೆನಡಾದ ಶಲ್ಲೊನ್ ಒಲ್ಸೆನ್ಸ್ ಅವರಿಂದ ಹಿನ್ನಡೆ ಅನುಭವಿಸಿದರು. ಅವರು ಮೊದಲ ಎರಡು ಪ್ರಯತ್ನದಲ್ಲಿ 7.000 ಮತ್ತು ಎರಡನೇ ಪ್ರಯತ್ನದಲ್ಲಿ 6.000 ಅಂಕ ಗಳಿಸಿದರು. ತಿಮ ಪಂದ್ಯ ಆಗಸ್ಟ್ 14ರಂದು ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com