36 ವರ್ಷಗಳ ನಂತರ, ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಹಾಕಿ ತಂಡ

ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮಹತ್ವದ ಪಂದ್ಯದಲ್ಲಿ ಬಲಿಷ್ಠ ...
ನಿನ್ನೆ ರಿಯೊ ಡಿ ಜನೈರೊದಲ್ಲಿ ನಡೆದ ಭಾರತ ಪುರುಷರ ಹಾಕಿ ಪಂದ್ಯದಲ್ಲಿ ಬಾಲ್ ಗಾಗಿ ಸೆಣಸಾಡುತ್ತಿರುವ ರಣದೀಪ್ ಸಿಂಗ್ ಮತ್ತು ನೆದರ್ಲ್ಯಾಂಡಿನ ಸಂದರ್ ಡಿ ವಿಜ್ನ್
ನಿನ್ನೆ ರಿಯೊ ಡಿ ಜನೈರೊದಲ್ಲಿ ನಡೆದ ಭಾರತ ಪುರುಷರ ಹಾಕಿ ಪಂದ್ಯದಲ್ಲಿ ಬಾಲ್ ಗಾಗಿ ಸೆಣಸಾಡುತ್ತಿರುವ ರಣದೀಪ್ ಸಿಂಗ್ ಮತ್ತು ನೆದರ್ಲ್ಯಾಂಡಿನ ಸಂದರ್ ಡಿ ವಿಜ್ನ್
ರಿಯೊ ಡಿ ಜನೈರೊ: ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮುಂದಿನ ಪಂದ್ಯವನ್ನು ಭಾರತ ಕೆನಡಾ ಜೊತೆ ಆಡಲಿದೆ.
ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್ ನಾಯಕತ್ವದ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3–2ರಲ್ಲಿ ಸೋಲಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಪರಾಭವಗೊಂಡಿತ್ತು. ಮಂಗಳವಾರ ಅರ್ಜೆಂಟೀನಾ ಎದುರು 2–1 ಗೋಲುಗಳಿಂದ ಗೆಲುವು ಸಾಧಿಸಿ ಒಟ್ಟು ಪಾಯಿಂಟ್ಸ್‌ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಿಕೊಂಡಿದೆ.
ಭಾರತ ಇರುವ ‘ಬಿ’ ಗುಂಪಿನಲ್ಲಿ ಒಟ್ಟು ಆರು ತಂಡಗಳಿದ್ದು ಇದರಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಐರ್ಲೆಂಡ್ ಮತ್ತು ಕೆನಡಾ  ತಲಾ ಮೂರು ಪಂದ್ಯಗಳನ್ನಾಡಿದ್ದು ಎಲ್ಲದರಲ್ಲಿಯೂ ಸೋಲು ಕಂಡಿವೆ. ಆದ್ದರಿಂದ ಈ ತಂಡಗಳ ನಾಕೌಟ್ ಪ್ರವೇಶದ ಹಾದಿ ಬಹುತೇಕ ಮುಚ್ಚಿ ಹೋಗಿದ್ದು ಅಗ್ರಸ್ಥಾನದಲ್ಲಿರುವ ಜರ್ಮನಿ, ನೆದರ್ಲೆಂಡ್ಸ್‌, ಭಾರತ ಮತ್ತು ಅರ್ಜೆಂಟೀನಾ ನಡುವೆ ಪೈಪೋಟಿ ಏರ್ಪಟ್ಟಿದೆ.
36 ವರ್ಷಗಳ ನಂತರ ಭಾರತೀಯ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ವಿಶ್ವ ರ್ಯಾಂಕ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಆಡಿರುವ ಮೂರು ಪಂದ್ಯಗಳಿಂದ ಎರಡರಲ್ಲಿ ಸೋತಿದ್ದು ಒಂದು ಪಂದ್ಯದಲ್ಲಷ್ಟೇ ಗೆಲುವು ಸಾಧಿಸಿದೆ. ಆದ್ದರಿಂದ ಈ ತಂಡದ ನಾಕೌಟ್‌ ಹಾದಿಯೇ ಖಚಿತವಾಗಿಲ್ಲ. ಆದ್ದರಿಂದ ‘ಎ’ ಗುಂಪಿನ ಹೋರಾಟವೂ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com