ರಿಯೋ ಒಲಂಪಿಕ್ಸ್: ಕಡಿಮೆ ಅಂತರದಲ್ಲಿ ದೀಪಾ ಕರ್ಮಾಕರ್ ಗೆ ಕೈತಪ್ಪಿದ ಪದಕ
ರಿಯೋ ಒಲಂಪಿಕ್ಸ್: ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಗೆ ರಿಯೊ ಒಲಿಂಪಿಕ್ಸ್ ನಲ್ಲಿ ಪದಕ ಕೆಲವೇ ಅಂತರದಲ್ಲಿ ಕೈತಪ್ಪಿದ್ದು, ಫೈನಲ್ ಪ್ರವೇಶಿಸಿದ ಮೊದಲ ಜಿಮ್ನಾಸ್ಟರ್ ಎಂಬ ಹೆಗ್ಗಳಿಕೆಯೊಂದಿಗೆ ದೇಶದ ಜನತೆಯ ಮನ ಗೆದ್ದಿದ್ದಾರೆ.
ಅಪಾಯಕಾರಿ ಆಗಿದ್ದ ಪ್ರೋಡುನೊವಾ ವಾಲ್ಟ್ ಸ್ಪರ್ಧೆಯನ್ನು ಉತ್ತಮವಾಗಿ ಪೂರೈಸಿದರಾದರು, ಲ್ಯಾಂಡಿಂಗ್ ವೇಳೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದು ಕಡಿಮೆ ಅಂಕಕ್ಕೆ ಕಾರಣವಾಗಿ, ಪದಕ ಕೈತಪ್ಪಿದೆ. ಆದರೆ ಎರಡು ಪ್ರಯತ್ನಗಳಿಂದ ದೀಪಾ ಕರ್ಮಾಕರ್ 15.066 ಅಂಗಳ ಸರಾಸರಿಯೊಂದಿಗೆ ಪಡೆದು 4 ನೇ ಸ್ಥಾನ ಪಡೆದಿದ್ದಾರೆ.
ದೀಪಾ ಕರ್ಮಾಕರ್ ಅವರ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೀಪಾ ಕರ್ಮಾಕರ್ ಅವರ ತಂದೆ, ದುಲಾಲ್ ಕರ್ಮಾಕರ್ " ಫೈನಲ್ಸ್ ನಲ್ಲಿ ನನ್ನ ಮಗಳ ಪ್ರದರ್ಶನ ಅತ್ಯುತ್ತಮವಾಗಿತ್ತು, ಆಕೆಯ ಸ್ಪರ್ಧೆಯ ಬಗ್ಗೆ ಅತ್ಯಂತ ಸಂತೋಷವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಗಳು ತ್ರಿಪುರಾದಂತಹ ರಾಜ್ಯದ ಸಾಧಾರಣ ಮನೆಯಿಂದ ವಿಶ್ವದರ್ಜೆಯ ಜಿಮ್ನಾಸ್ಟಿಕ್ ಸ್ಪರ್ಧೆಗೆ ತೆರಳಿದ್ದೇ ತಮಗೆ ಹೆಮ್ಮೆಯ ಸಂಗತಿ, 2018 ರ ಒಲಂಪಿಕ್ಸ್ ನಲ್ಲಿ ತಮ್ಮ ಮಗಳು ಇನ್ನು ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ದೀಪಾ ಕರ್ಮಾಕರ್ ತಾಯಿ ಗೌರಿ ದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ