ರಿಯೊದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಭಾರತೀಯ ಅಥ್ಲೀಟ್ ಗಳಿಗೆ ಅಸಮಾಧಾನ ತರಿಸಿದ ಆತಿಥ್ಯ

ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯುವಜನ ಮತ್ತು ಕ್ರೀಡಾ ಸಚಿವಾಲಯ ಹಾಗೂ ಬ್ರೆಜಿಲ್ ನ ರಾಯಭಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಿಯೊ ಡಿ ಜನೈರೊ: ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯುವಜನ ಮತ್ತು ಕ್ರೀಡಾ ಸಚಿವಾಲಯ ಹಾಗೂ ಬ್ರೆಜಿಲ್ ನ ರಾಯಭಾರ ಕಚೇರಿ ರಿಯೊ ಡಿ ಜನೈರೊದಲ್ಲಿ ನಿನ್ನೆ ಭಾರತೀಯ ಅಥ್ಲೀಟ್ ಗಳಿಗೆ ಆತಿಥ್ಯ ಕಾರ್ಯಕ್ರಮ ಇಟ್ಟುಕೊಂಡಿತ್ತು. 
ಆದರೆ ಕ್ರೀಡಾಪಟುಗಳಿಗೆ ಇದು ಒಂಚೂರು ಇಷ್ಟವಾಗಲಿಲ್ಲ. ಕಾರಣ, ಹಲವು ದಿನಗಳಿಂದ ಮನೆಯ ಆಹಾರ ಸಿಗದೆ ಒದ್ದಾಡುತ್ತಿರುವ ಕ್ರೀಡಾಪಟುಗಳು ನಿನ್ನೆ ಅಪರಾಹ್ನ ನಡೆದ ಆತಿಥ್ಯಕೂಟದಲ್ಲಿ ತಮಗೆ ಒಳ್ಳೆಯ ರುಚಿರುಚಿಯಾದ ಭಾರತೀಯ ಆಹಾರ ನೀಡಬಹುದು, ಕೊನೆ ಪಕ್ಷ ಭಾರತದ ಉತ್ತಮ ಸ್ನ್ಯಾಕ್ಸ್ನ್ ನ್ನಾದರೂ ನೀಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು.
ಅವರಿಗೆ ಸಿಕ್ಕಿದ್ದು ಕಾಫಿ, ಟೀ, ಜ್ಯೂಸ್ ಮತ್ತು ನೆಲಗಡಲೆ, ಕುಕ್ಕೀಸ್, ಚಾಕಲೇಟ್ಸ್. ಇದನ್ನು ನೋಡಿದ ಅಥ್ಲೀಟ್ ಗಳ ಮೂಡ್ ಆಫ್ ಆಯಿತು.
ಇದಕ್ಕೋಸ್ಕರ ನಮ್ಮನ್ನು ಒಲಿಂಪಿಕ್ಸ್ ಗ್ರಾಮದಿಂದ ಇಲ್ಲಿಗೆ ಬರಲು ಹೇಳಿದರೇ? ಎಂದು ಹೆಸರು ಹೇಳಲಿಚ್ಛಿಸದ ಒಬ್ಬ ಅಥ್ಲೀಟ್ ಸಿಟ್ಟಿನಿಂದ ಕೇಳಿದರು. ರಿಸೆಪ್ಷನ್ ಗೆ ಕ್ರೀಡಾಪಟುಗಳಿಗೆ ಬಂದು ಹೋಗಲು 4 ಗಂಟೆ ಬೇಕಾಯಿತು.
ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಯಾದವ್ ಹೆಸರಿನಲ್ಲಿ ಕ್ರೀಡಾಪಟುಗಳಿಗೆ ಆತಿಥ್ಯಕ್ಕೆ ರಾಯಭಾರ ಕಚೇರಿ ಮೂಲಕ ಆಹ್ವಾನ ಕಳುಹಿಸಲಾಗಿತ್ತು. ಬ್ರೆಸಿಲ್ ನ ಭಾರತ ರಾಯಭಾರಿ ಸುನಿಲ್ ಲಾಲ್ ರಿಸೆಪ್ಷನ್ ನಲ್ಲಿ ಭಾಗಿಯಾಗಿದ್ದರು. ಸುಮಾರು 200 ಮಂದಿ ಆಹ್ವಾನಿತರಿದ್ದರು. ರಿಯೊದಲ್ಲಿ ರಾಯಭಾರ ಸಹಾಯಕ ಕಚೇರಿ ಇದೆ. ರಾಯಭಾರ ಕಚೇರಿ ಇರುವುದು ರಾಜಧಾನಿ ಜ್ರಜಿಲಿಯಾದಲ್ಲಿ.
ಅಥ್ಲೀಟ್ ಮತ್ತು ಅಧಿಕಾರಿಗಳನ್ನು ರಿಯೊದ ಕೇಂದ್ರ ಲಗೂನ್ ನ ಲಗೌ ಪ್ರದೇಶದ ಒಲಿಂಪಿಯನ್ಸ್ ಪುನರ್ಮಿಲನ ಕೇಂದ್ರಕ್ಕೆ ಎರಡು ಬಸ್ಸುಗಳಲ್ಲಿ ಕರೆ ತರಲಾಯಿತು. ರಿಯೊದಲ್ಲಿ ನೆಲೆಸಿರುವ ಭಾರತೀಯರು ಮತ್ತು ಅಲ್ಲಿಗೆ ಭೇಟಿ ನೀಡಿದ ಭಾರತೀಯರು ಕೂಡ ರಿಸೆಪ್ಷನ್ ನಲ್ಲಿ ಭಾಗಿಯಾಗಿದ್ದರು.
'' ಅವರು ಒಳ್ಳೆಯ ಆಹಾರ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಅಥ್ಲೀಟ್ ಗಳಿಗೆ ಬೇಗನೆ ಹಸಿವಾಗುತ್ತದೆ ಮತ್ತು ಉತ್ತಮ ಆಹಾರ ಬೇಕಾಗಿರುವುದರಿಂದ ಉತ್ತಮ ಸ್ನ್ಯಾಕ್ಸ್ ಕೂಡ ನೀಡಬಹುದಾಗಿತ್ತು ಎನ್ನುತ್ತಾರೆ ರಿಸೆಪ್ಷನ್ ನಲ್ಲಿ ಪಾಲ್ಗೊಂಡ ಭಾರತದ ಮುಖ್ಯ ವೈದ್ಯಕೀಯ ಅಧಿಕಾರಿ ಪವಂದೀಪ್ ಸಿಂಗ್ ಕೊಹ್ಲಿ.
ರಿಸೆಪ್ಷನ್ ನಲ್ಲಿ ಪಾಲ್ಗೊಂಡ ಬಹುತೇಕ ಎಲ್ಲಾ ಅಥ್ಲೀಟ್ ಗಳ ಅಭಿಪ್ರಾಯವೂ ಇದೇ ಆಗಿತ್ತು ಮತ್ತು ಅಲ್ಲಿಂದ ಬೇಗನೆ ಜಾಗ ಖಾಲಿ ಮಾಡಿ ಬಸ್ಸಿನಲ್ಲಿ ಹತ್ತಿ ಕುಳಿತರು. ಎಲ್ಲರೂ ಬೇಸರದಲ್ಲಿ ಸುಮ್ಮನೆ ಮುಖ ಗಂಟಿಕ್ಕಿಕೊಂಡು ಕೂತಿರುವಾಗ ಪುರುಷರ ಹಾಕಿ ತಂಡದ ನಾಯಕ ಪಿ.ಆರ್.ಸ್ರೀಜೆಶ್, ತಾನು ಹೊಟ್ಟೆ ತುಂಬುವ ಆಹಾರವನ್ನು ತುಂಬಾ ಖುಷಿಯಿಂದ ಸವಿದಿದ್ದೇನೆ. ಎಷ್ಟರ ಮಟ್ಟಿಗೆ ಎಂದರೆ ರಾತ್ರಿ ಊಟ ಕೂಡ ಮಾಡುವುದಿಲ್ಲ ಎಂದಾಗ ಬಸ್ಸಿನಲ್ಲಿ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದವರ ಮುಖದಲ್ಲಿ ಸ್ವಲ್ಪ ನಗೆ ತೇಲಿಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com