ದೀಪಾ ಕರ್ಮಾಕರ್‌, ಜೀತು ರಾಯ್ ಗೆ ಖೇಲ್ ರತ್ನ ಪ್ರಶಸ್ತಿ?

ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಹಾಗೂ ಶೂಟರ್...
ದೀಪಾ ಕರ್ಮಾಕರ್‌
ದೀಪಾ ಕರ್ಮಾಕರ್‌
ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಹಾಗೂ ಶೂಟರ್ ಜೀತು ರಾಯ್ ಹೆಸರನ್ನು ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಮಾಧ್ಯಮ ವರದಿಯ ಪ್ರಕಾರ ದೀಪಾ ಅವರಿಗೆ ಪ್ರಶಸ್ತಿ ನೀಡುವುದು ಬಹುತೇಕ ಖಚಿತವಾಗಿದ್ದು ರಾಷ್ಟ್ರೀಯ ಕ್ರೀಡಾ ದಿನದಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎನ್ನಲಾಗಿದೆ.
ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಜಿಮ್ನಾಸ್ಟರ್ ಎಂಬ ಹೆಗ್ಗಳಿಕೆಯೊಂದಿಗೆ ದೇಶದ ಜನತೆಯ ಮನ ಗೆದ್ದಿದ್ದ ದೀಪಾ ಕರ್ಮಾಕರ್ ಅವರಿಗೆ ಸ್ವಲ್ಪದರಲ್ಲಿ ಐತಿಹಾಸಿಕ ಕಂಚಿನ ಪದಕ ಕೈತಪ್ಪಿತ್ತು.
ಅಪಾಯಕಾರಿ ಆಗಿದ್ದ ಪ್ರೋಡುನೊವಾ ವಾಲ್ಟ್ ಸ್ಪರ್ಧೆಯನ್ನು ಉತ್ತಮವಾಗಿ ಪೂರೈಸಿದರಾದರು, ಲ್ಯಾಂಡಿಂಗ್ ವೇಳೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದು ಕಡಿಮೆ ಅಂಕಕ್ಕೆ ಕಾರಣವಾಗಿತ್ತು. ಆದರೆ ಎರಡು ಪ್ರಯತ್ನಗಳಿಂದ ದೀಪಾ ಕರ್ಮಾಕರ್ 15.066 ಅಂಗಳ ಸರಾಸರಿಯೊಂದಿಗೆ 4 ನೇ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com