ಪದಕ ಗೆದ್ದ ಸಾಕ್ಷಿ ಮಲಿಕ್ ಸಾಧನೆ ಹಿಂದೆ ಕನ್ನಡಿಗ ಕೋಚ್

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕುಸ್ತಿಪಟು ಸಾಕ್ಷಿ ಮಲಿಕ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದು, ಇವರ ಸಾಧನೆ ಹಿಂದೆ ಕನ್ನಡಿಗ,
ಸಾಕ್ಷಿ ಮಲಿಕ್ ಜೊತೆ ಶ್ಯಾಮ್ ಬುಡ್ಕಿ(ಮಧ್ಯದಲ್ಲಿರುವವರು)
ಸಾಕ್ಷಿ ಮಲಿಕ್ ಜೊತೆ ಶ್ಯಾಮ್ ಬುಡ್ಕಿ(ಮಧ್ಯದಲ್ಲಿರುವವರು)
ಬೆಂಗಳೂರು: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕುಸ್ತಿಪಟು ಸಾಕ್ಷಿ ಮಲಿಕ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದು, ಇವರ ಸಾಧನೆ ಹಿಂದೆ ಕನ್ನಡಿಗ, ಕರ್ನಾಟಕ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯೊಬ್ಬರ ಶ್ರಮವಿದೆ.
ಹೌದು, ಹರ್ಯಾಣದ ಸಾಕ್ಷಿ ಮಲಿಕ್ ಸಾಧನೆಯ ಹಿಂದೆ ನಮ್ಮ ರಾಜ್ಯದ ಶ್ಯಾಮ್ ಬುಡಕಿ ಅವರ ಪರಿಶ್ರಮವಿದೆ. ಒಲಂಪಿಕ್ಸ್`ನಲ್ಲಿ ಕಂಚು ಗೆದ್ದು  ಸಂಚಲನ ಮೂಡಿಸಿದ ಸಾಕ್ಷಿ ಮಲಿಕ್ ತರಬೇತು ದಾರರಲ್ಲಿ ಶ್ಯಾಮ್ ಬುಡ್ಕಿ ಕೂಡಾ ಒಬ್ಬರಾಗಿದ್ದಾರೆ.
ಸಾಕ್ಷಿ ಮಲಿಕ್ ಮುಖ್ಯ ಕೋಚ್ ಕುಲದೀಪ್ ಸಿಂಗ್ ಅವರಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮ್ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೊದ್ಯಮ ವಿಭಾಗದಲ್ಲಿ 2007 ರಲ್ಲಿ ಪದವಿ ಪಡೆದಿದ್ದಾರೆ, ನಂತರ ಕುಸ್ತಿಯ ಮೇಲಿನ ತುಡಿತದಿಂದಾಗಿ ಶ್ಯಾಮ್ ಸದ್ಯ ಪಟಿಯಾಲದ ಕ್ರೀಡಾ ಪ್ರಾಧಿಕಾರದಲ್ಲಿ ಕುಸ್ತಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಿಯೋ ಒಲಂಪಿಕ್​ಗೆ ಆಯ್ಕೆಯಾದ ಕುಸ್ತಿಪಟುಗಳಿಗೆ ಕಳೆದ ಒಂದೂವರೆ ವರ್ಷದಿಂದ ಶ್ಯಾಮ್​ ಲಖನೌದಲ್ಲಿ ತರಬೇತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com