
ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಪ್ರದರ್ಶನದ ಬಗ್ಗೆ ಇಡೀ ದೇಶವೇ ಹೆಮ್ಮೆಯಿಂದ ಖುಷಿ ಪಡುತ್ತಿದೆ.
ಆದರೆ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪ್ರಥಮ ಪದಕ ಕಂಚಿನ ಪದಕ ತಂದು ಕೊಟ್ಟ ಸಾಕ್ಷಿ ಮಲಿಕ್ ವಿಜಯಕ್ಕೆ ಟ್ವಿಟರ್ನಲ್ಲಿ ಪಾಕಿಸ್ತಾನ ಪತ್ರಕರ್ತ ಓಮರ್ ಕುರೇಶಿ, ಭಾರತ ಗೆದ್ದಿರುವುದು ಕಂಚಿನ ಪದಕವಾದರೂ 20 ಚಿನ್ನ ಪದಕ ಗೆದ್ದಂತೆ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಜೊತೆಗೆ ಪಾಕಿಸ್ತಾನ ಈ ಹಿಂದೆ ಕುಸ್ತಿ ಸೇರಿದಂತೆ ಇತರ ಕ್ರೀಡೆಗಳಲ್ಲಿ ಪಡೆದ ಪದಕ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅನೇಕರು ಟ್ವಿಟ್ಟರ್ ನಲ್ಲಿ ಓಮರ್ ಕುರೇಶಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಓಮರ್ ಕುರೇಶಿ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಚಾಟಿ ಬೀಸಿದ್ದಾರೆ. ಪದಕದ ಖಾತೆ ತೆರೆದು ಹೊಸ ಉತ್ಸಾಹ ಮೂಡಿಸಿರುವ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿರುವುದು ನಮಗೆ 20 ಚಿನ್ನದ ಪದಕ ಗೆದ್ದಷ್ಟೆ ಹರ್ಷವಾಗಿದೆ ಎಂದು ರೀಟ್ವೀಟ್ ಮಾಡಿದ್ದಾರೆ.
Advertisement