ಜಿಮ್ನಾಸ್ಟ್ ದೀಪ ಕರ್ಮಾಕರ್ ಅವರಿಗೆ ತ್ರಿಪುರಾದಲ್ಲಿ ಭವ್ಯ ಸ್ವಾಗತ

ಒಲಂಪಿಕ್ಸ್ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ತ್ರಿಪುರಾ ಸರ್ಕಾರ ಸೋಮವಾರ ಭವ್ಯ ಸ್ವಾಗತ ನೀಡಿ ಗೌರವಿಸಿದೆ.
ಒಲಂಪಿಕ್ಸ್ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್
ಒಲಂಪಿಕ್ಸ್ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್
ಅಗರ್ತಲಾ: ಒಲಂಪಿಕ್ಸ್ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ತ್ರಿಪುರಾ ಸರ್ಕಾರ ಸೋಮವಾರ ಭವ್ಯ ಸ್ವಾಗತ ನೀಡಿ ಗೌರವಿಸಿದೆ. 
ಅಗರ್ತಲಾ ವಿಮಾನನಿಲ್ದಾಣಕ್ಕೆ ಬಂದಿಳಿದ ದೀಪಾ ಮತ್ತು ಅವರ ತರಬೇತುದಾರ ಬಿಶೇಶ್ವರ್ ನಂದಿ ಅವರಿಗೆ ನೂರಾರು ಅಭಿಮಾನಿಗಳು, ಅಧಿಕಾರಿಗಳು ಸ್ವಾಗತಿಸಿದ್ದಾರೆ. 
ನೂರಾರು ವಾಹನಗಳು ಮತ್ತು ದ್ವಿಚಕ್ರ ವಾಹನಗಳು ರಸ್ತೆಗಿಳಿದು ರಾಜ್ಯದ ಗೌರವವನ್ನು ಭವ್ಯವಾಗಿ ಸ್ವಾಗತಿಸಿದ್ದಾರೆ. 
"ಮುಂದಿನ ಏಷಿಯನ್ ಕ್ರೀಡಾಕೂಟದಲ್ಲಿ, ಕಾಮನ್ ವೆಲ್ತ್ ಮತ್ತು 2020 ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗಳಿಸಲು ಶ್ರಮವಹಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು ಅತ್ಯುತ್ತಮ ಪ್ರದರ್ಶನ ನೀಡಲು ಶ್ರಮಿಸಲಿದ್ದೇನೆ" ಎಂದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟ, ಆದರೆ ಮೊದಲ ಬಾರಿಗೆ 52 ವರ್ಷಗಳ ನಂತರ ಒಲಂಪಿಕ್ಸ್ ಜಿಮ್ನಾಸಿಯಂ ಕ್ರೀಡೆಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾದ ದೀಪಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com