ಉತ್ತರ ಕೊರಿಯಾ: ರಿಯೋನಲ್ಲಿ ಪದಕ ಗೆಲ್ಲದ ಕ್ರೀಡಾಪಟುಗಳಿಗೆ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ

ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲ್ಲು ವಿಫಲರಾದ ಕ್ರೀಡಾಪಟುಗಳಿಗೆ ಕಠಿಣ ಶಿಕ್ಷೆಯನ್ನು ಸರ್ವಾಧಿಕಾರಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅನ್ ನೀಡಲು ನಿರ್ಧರಿಸಿದ್ದಾರೆ...
ಕಿಮ್ ಜಾಂಗ್ ಅನ್
ಕಿಮ್ ಜಾಂಗ್ ಅನ್
ಉತ್ತರ ಕೊರಿಯಾ: ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲ್ಲು ವಿಫಲರಾದ ಕ್ರೀಡಾಪಟುಗಳಿಗೆ ಕಠಿಣ ಶಿಕ್ಷೆಯನ್ನು ಸರ್ವಾಧಿಕಾರಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅನ್ ನೀಡಲು ನಿರ್ಧರಿಸಿದ್ದಾರೆ. 
ರಿಯೋ ಒಲಿಂಪಿಕ್ಸ್ ನಲ್ಲಿ ಕಳಪೆ ಸಾಧನೆ ಮಾಡಿದ ಉತ್ತರ ಕೊರಿಯಾ ಕ್ರೀಡಾಪಟುಗಳಿಗೆ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. 
ಉತ್ತರ ಕೊರಿಯಾದ ಎದುರಾಳಿ ರಾಷ್ಟ್ರ ದಕ್ಷಿಣ ಕೊರಿಯಾ 9 ಚಿನ್ನ ಸೇರಿ ಒಟ್ಟು 21 ಪದಕ ಗೆದ್ದಿರುವುದು ಕಿಮ್ ಜಾಂಗ್ ಅನ್ ಸಿಟ್ಟಾಗಲು ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ. 
ರಿಯೋ ಒಲಿಂಪಿಕ್ಸ್ ನಲ್ಲಿ ತಮ್ಮ ಕ್ರೀಡಾಪಟುಗಳು ಕನಿಷ್ಠ 17 ಪದಕಗಳನ್ನು ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 2 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 7 ಪದಕ ಗೆಲ್ಲುವಲ್ಲಿ ಸಫಲರಾಗಿದ್ದರು.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com