2012ರ ಲಂಡನ್ ಒಲಿಂಪಿಕ್ಸ್: ಯೋಗೇಶ್ವರ್ ದತ್ ಕಂಚು ಪದಕ ಬೆಳ್ಳಿಗೆ ಬಡ್ತಿ!

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಕುಸ್ತಿಪಟು ಯೋಗೇಶ್ವರ್ ದತ್ ಗೆ ಸಿಹಿ ಸುದ್ದಿಯೊಂದು ಕಾದಿದೆ...
ಯೋಗೇಶ್ವರ್ ದತ್
ಯೋಗೇಶ್ವರ್ ದತ್

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಕುಸ್ತಿಪಟು ಯೋಗೇಶ್ವರ್ ದತ್ ಗೆ ಸಿಹಿ ಸುದ್ದಿಯೊಂದು ಕಾದಿದೆ.

2012ರ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕುಸ್ತಿ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರ ಕಂಚಿನ ಪದಕ ಬೆಳ್ಳಿ ಪದಕಕ್ಕೆ ಬಡ್ತಿ ಪಡೆಯಲಿದೆ. ಬೆಳ್ಳಿ ಪದಕ ವಿಜೇತ ರಷ್ಯಾದ ಕುಸ್ತಿಪಟು ಬೆಸಿಕ್ ಕುಡ್ಕೋವ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದರಿಂದ ಅವರ ಪದಕವನ್ನು ಹಿಂಪಡೆಯಲಿದ್ದು ಎರಡನೇ ಸ್ಥಾನಕ್ಕೆ ಯೋಗೇಶ್ವರ್ ದತ್ ಬಡ್ತಿ ಪಡೆಯಲಿದ್ದಾರೆ.

ಈ ಬದಲಾವಣೆಯ ಕುರಿತು ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳಿಂದ ಅಧಿಕೃತ ಮಾಹಿತಿಗಳು ಬಂದಿಲ್ಲ ಎಂದು ರಷ್ಯಾದ ಏಜೇನ್ಸಿ ಒಂದು ವರದಿ ಮಾಡಿದೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ ನಲ್ಲಿ ಪದಕ ಗೆದ್ದಿದ್ದ ಬೆಸಿಕ್ ಕುಡ್ಕೋವ್ 2013ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯೂ) ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಈ ನೂತನ ಬದಲಾವಣೆಯ ಕುರಿತು ದೃಢಿಕರಿಸಲಿವೆ. ಅಧಿಕಾರಿಗಳಿಂದ ದೃಢಿಕರಣ ಪತ್ರ ಬಂದ ನಂತರ ಈ ಬದಲಾವಣೆ ಸಾಧ್ಯ.

ರಿಯೋ ಒಲಿಂಪಿಕ್ಸ್ ನ 65 ಕೆಜಿ ಫ್ರಿಸ್ಟೈಲ್ ವಿಭಾಗದ ಮೊದಲ ಹಂತದಲ್ಲೇ ಸೋತು ಕೋಟ್ಯಾಂತರ ಅಭಿಮಾನಿಗಳ ಆಸೆ ನಿರಾಸೆಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com