

ನವದೆಹಲಿ: ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ 444 ರನ್ ಗಳನ್ನು ಗಳಿಸಿದ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ಗೆ ಬ್ರಿಟೀಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ಸವಾಲು ಹಾಕಿದ್ದಾರೆ.
ಟ್ವಿಟರ್ ನಲ್ಲಿ ಸೆಹ್ವಾಗ್ ಗೆ ಸವಾಲು ಹಾಕಿರುವ ಪಿಯರ್ಸ್ ಮಾರ್ಗನ್, ಭಾರತ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದಕ್ಕೂ ಮುನ್ನ ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ ವಿಶ್ವ ಕಪ್ ಗೆಲ್ಲಲಿದೆ ಎಂದು ಸವಾಲು ಹಾಕಿದ್ದಾರೆ.
ರಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ ಪಿಯರ್ಸ್ ಮಾರ್ಗನ್, ಸಿಕ್ಕಿರುವ ಎರಡು ಪದಕಗಳಿಗೆ ನಡೆದಿದೆ ಸಂಭ್ರಮಾಚರಣೆ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವೀರೇಂದ್ರ ಸೆಹ್ವಾಗ್, ವಿಶ್ವಕ್ಕೆ ಕ್ರಿಕೆಟ್ ನ್ನು ಪರಿಚಯಿಸಿದ ಇಂಗ್ಲೆಂಡ್ ಗೆ ಒಂದೇ ಒಂದು ವಿಶ್ವಕಪ್ ನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಬ್ರಿಟನ್ ಪತ್ರಕರ್ತನಿಗೆ ಟಾಂಗ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ನ ಉತ್ತಮ ಪ್ರದರ್ಶನದ ಬೆನ್ನಲ್ಲೇ ಬ್ರಿಟನ್ ಪತ್ರಕರ್ತ ವೀರೇಂದ್ರ ಸೆಹ್ವಾಗ್ ಗೆ ಸವಾಲು ಹಾಕಿದ್ದಾರೆ.
Advertisement