ರಿಯೋ ಒಲಿಂಪಿಕ್ಸ್‌ನಲ್ಲಿ ಐಒಎ ಅಧಿಕಾರಿಗಳು ನಮ್ಮನ್ನು ಸೇವಕರಂತೆ ಕಂಡಿದ್ದರು: ಚೌರಾಸಿಯಾ

ರಿಯೋ ಒಲಿಂಪಿಕ್ಸ್ ವೇಳೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ಅಧಿಕಾರಿಗಳು ನಮ್ಮನ್ನು ಸೇವಕರಂತೆ ಕೀಳಾಗಿ ಕಂಡಿದ್ದರು...
ಚೌರಾಸಿಯಾ
ಚೌರಾಸಿಯಾ
ಕೋಲ್ಕತ್ತಾ: ರಿಯೋ ಒಲಿಂಪಿಕ್ಸ್ ವೇಳೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ಅಧಿಕಾರಿಗಳು ನಮ್ಮನ್ನು ಸೇವಕರಂತೆ ಕೀಳಾಗಿ ಕಂಡಿದ್ದರು ಎಂದು ಗಾಲ್ಫರ್ ಎಸ್ಎಸ್ಪಿ ಚೌರಾಸಿಯಾ ಕಿಡಿಕಾರಿದ್ದಾರೆ. 
ವಿಮಾನ ನಿಲ್ದಾಣದಲ್ಲಿ ನಮ್ಮನ್ನು 4 ಗಂಟೆ ಕಾಲ ಕಾಯಿಸಲಾಗಿತ್ತು. ಕ್ರೀಡಾ ಗ್ರಾಮಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಿರಲಿಲ್ಲ. ರಿಯೋದಲ್ಲಿ ಮಳೆ ಬರುತ್ತಿದ್ದರೂ ಕೊಡೆಯನ್ನು ಕೂಡ ನೀಡಿರಲಿಲ್ಲ. ಐಒಎ ಅಧಿಕಾರಿಗಳೆಲ್ಲ ಕೂಲಿಯಾಳುಗಳ ಜತೆ ವರ್ತಿಸುವ ಮಾಲೀಕರಂತೆ ದರ್ಪದಿಂದ ವರ್ತಿಸುತ್ತಿದ್ದರು ಎಂದರು ಆರೋಪಿಸಿದ್ದಾರೆ. 
ರಿಯೋ ತರಬೇತಿ ಪಡೆದುಕೊಳ್ಳಲು 30 ಲಕ್ಷ ರುಪಾಯಿ ವೆಚ್ಚವನ್ನು ಸರ್ಕಾರ ನೀಡುವುದಾಗಿ ತಿಳಿಸಿತ್ತು. ಆದರೆ 5.5 ಲಕ್ಷ ರುಪಾಯಿ ನೀಡಿ ಇನ್ನುಳಿದ ಹಣವನ್ನು ನೀಡಿಲ್ಲ ಎಂದು ಚೌರಾಸಿಯಾ ದೂರಿದ್ದಾರೆ. 
ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ವೇಳೆ ಮ್ಯಾರಥಾನ್ ಸ್ಪರ್ಧಿ ಒಪಿ ಜೈಶಾ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ವಿರುದ್ಧ ಧ್ವನಿ ಎತ್ತಿತ್ತು ಇದೀಗ ಪೂರಕವಾಗುವಂತೆ ಇದೀಗ ಚೌರಾಸಿಯಾ ಸಹ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com