ಬಿಎಂಡಬ್ಲ್ಯೂ ಕಾರ್ ಬದಲು 25 ಲಕ್ಷ ರು. ಪಡೆದ ದೀಪಾ ಕರ್ಮಾಕರ್, ಹೊಸ ಕಾರು ಖರೀದಿ

ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ನಾಲ್ಕನೆ ಸ್ಥಾನ ಪಡೆದಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್...
ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಸಿಂಧು ಅವರ ಕೋಚ್ ಗೋಪಿಚಂದ್ ಅವರಿಗೆ ಕ್ರಿಕೆಟ್ ತಾರೆ ಹಾಗೂ ಬಿಎಂಡಬ್ಲ್ಯೂ ಕಾರ್ ರಾಯಭಾರಿ ಸಚಿನ್ ತೆಂಡೂಲ್ಕರ್ ಕೀ ಹಸ್ತಾಂತರ
ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಸಿಂಧು ಅವರ ಕೋಚ್ ಗೋಪಿಚಂದ್ ಅವರಿಗೆ ಕ್ರಿಕೆಟ್ ತಾರೆ ಹಾಗೂ ಬಿಎಂಡಬ್ಲ್ಯೂ ಕಾರ್ ರಾಯಭಾರಿ ಸಚಿನ್ ತೆಂಡೂಲ್ಕರ್ ಕೀ ಹಸ್ತಾಂತರ
ತ್ರಿಪುರಾ: ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ನಾಲ್ಕನೆ ಸ್ಥಾನ ಪಡೆದಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ತಮಗೆ ಬಹುಮಾನವಾಗಿ ಬಂದಿದ್ದ ದುಬಾರಿ ಬಿಎಂಡಬ್ಲ್ಯೂ ಕಾರನ್ನು ಹಿಂದಿರುಗಿಸಿದ್ದು, ಬಿಎಂಡಬ್ಲ್ಯೂ ಬದಲಿಗೆ, 25 ಲಕ್ಷ ರು. ಪಡೆದುಕೊಂಡಿದ್ದಾರೆ.
ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯರಾಗಿದ್ದ ದೀಪಾ ಕರ್ಮಾಕರ್ ಅವರಿಗೆ ಹೈದ್ರಾಬಾದ್ ಬ್ಯಾಡ್ಮಂಟನ್ ಅಸೋಷಿಯನ್ ಬಿಎಂಡಬ್ಲ್ಯೂ ಕಾರ್ ಕೊಡುಗೆಯಾಗಿ ನೀಡಿತ್ತು. ಆದರೆ ದೀಪಾ ಕರ್ಮಾಕರ್ ಊರಿನಲ್ಲಿ ಬಿಎಂಡಬ್ಲ್ಯೂ ಕಾರ್ ಸಂಚರಿಸುವಷ್ಟು ರಸ್ತೆಗಳು ವಿಸ್ತಾರವಾಗಿಲ್ಲ, ಸರ್ವಿಸ್ ಸೆಂಟರ್ ಇಲ್ಲ. ಸಂಪರ್ಕ ರಸ್ತೆಗಳು ಕೂಡ ಸರಿ ಇಲ್ಲವಾದ್ದರಿಂದ ಕಾರ್ ವಾಪಸ್ ಮಾಡಿದ್ದಾರೆ.
ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ದೀಪಾ ಅವರು ಕಾರ್ ವಾಪಸ್ ಮಾಡಿದ್ದಾರೆ ಮತ್ತು ಅದರ ಬದಲಿಗೆ 25 ಲಕ್ಷ ರುಪಾಯಿ ಪಡೆದು, ಆ ಹಣದಲ್ಲಿ ಅವರ ಕುಟುಂಬ ಹುಂಡೈ ಎಲೆಂಟ್ರಾ ಕಾರ್ ಖರೀದಿಸಿದೆ ಎಂದು ಅವರ ಕೋಚ್ ಬಿಸ್ವೇಶ್ವರ್ ನಂದಿ ಅವರು ಹೇಳಿದ್ದಾರೆ.
ಅಷ್ಟೊಂದು ದುಬಾರಿ ಕಾರನ್ನು ನಿರ್ವಹಣೆ ಮಾಡುವುದು ಅಗರ್ತಾಲದಂತಹ ಜಾಗದಲ್ಲಿ ಕಷ್ಟವಾಗಿದೆ. ಆದ್ದರಿಂದ ವಾಪಸ್ಸು ಮಾಡಲಾಗುವುದು, ಇದು ದೀಪಾ ಮಾತ್ರವಲ್ಲ, ಮನೆಯವರು ಎಲ್ಲರೂ ಸೇರಿ ಚರ್ಚಿಸಿ ತೆಗೆದುಕೊಂಡ ನಿರ್ಧಾರವೆಂದು ಅವರ ನಂದಿ ತಿಳಿಸಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಅಮೋಘ ಸಾಧನೆ ಮಾಡಿದ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಸಿಂಧು ಅವರ ಕೋಚ್ ಗೋಪಿಚಂದ್ ಅವರಿಗೆ ಕ್ರಿಕೆಟ್ ತಾರೆ ಹಾಗೂ ಬಿಎಂಡಬ್ಲ್ಯೂ ಕಾರ್ ರಾಯಭಾರಿ ಸಚಿನ್ ತೆಂಡೂಲ್ಕರ್ ಕೀ ಹಸ್ತಾಂತರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com