
ಭಾರತದ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಆಗಿರುವ ಟೀಂ ಇಂಡಿಯಾದ ನಿವೃತ್ತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ ಪರಾಮರ್ಶೆ ಗ್ರೂಪ್ ಗೆ ಹೆಸರಿಸಲಾಗಿದ್ದು, ಹೊಸ ಜವಾಬ್ದಾರಿ ಹೊರಿಸಲಾಗಿದೆ.
ಈ ಪರಾಮರ್ಶೆ ಗ್ರೂಪ್ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನು ಒಳಗೊಂಡಿದೆ. ಇದರಲ್ಲಿ ಕಾನೂನು ತಜ್ಞ ಲೂಯಿಸ್ ವೆಸ್ಟನ್ ಮತ್ತು ಸ್ವತಂತ್ರ ಭ್ರಷ್ಟಾಚಾರ ವಿರೋಧಿ ಸಲಹೆಗಾರ ಜಾನ್ ಅಬಾಟ್(ಇವರು ಐಕ್ಯತಾ ಕಾರ್ಯಕಾರಿ ಪಕ್ಷದ ಅಧ್ಯಕ್ಷರೂ ಸಹ) ಭ್ರಷ್ಟಾಚಾರ ತಡೆ ಘಟಕದ ಅಧ್ಯಕ್ಷ ಸರ್ ರೋನಿ ಫ್ಲನಗಾನ್, ಐಸಿಸಿ ಮುಖ್ಯ ಕಾರ್ಯಕಾರಿ ಡೇವಿಡ್ ರಿಚರ್ಡ್ ಸನ್ ಇರಲಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಈ ಪರಾಮರ್ಶಾ ಸಮಿತಿಯು ವರ್ಷದಲ್ಲಿ ಒಮ್ಮೆ ಮಾತ್ರ ಸಭೆ ಸೇರಿ ಕ್ರಿಕೆಟ್ ನಲ್ಲಿ ಕಳ್ಳಾಟ ನುಸುಳದಂತೆ ಇಲ್ಲವೇ ಭ್ರಷ್ಟಾಚಾರ ತಡೆಗೆ ಬೇಕಾದ ಸೂಕ್ತ ಮಾರ್ಗದರ್ಶನ, ಸಲಹೆ ಹಾಗೂ ಕಾರ್ಯಸೂಚಿಗಳನ್ನು ನೀಡಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
Advertisement