
ನಾಗ್ಪುರ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿರುವ ವನ್ಯಜೀವಿ ಅಭಯಾರಣ್ಯಕ್ಕೆ ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ವಾರಾಂತ್ಯ ರಜೆ ನಿಮಿತ್ತ ಭೇಟಿ ನೀಡಿದರು.
ಸಚಿನ್ ತಮ್ಮ ಟ್ವಿಟರ್ ನಲ್ಲಿ ಅರಣ್ಯದಲ್ಲಿ ಟಿ-ಶರ್ಟ್ ಹಾಗೂ ಜೀನ್ಸ್ ಧರಿಸಿದ್ದ ಫೋಟೋ ಹಾಕಿ ನಾನು ಎಲ್ಲಿದ್ದೇನೆ ಊಹಿಸಿ ಎಂದು ಪ್ರಕಟಿಸಿದ್ದರು. ನಾಗ್ಪುರ ಬಳಿಯಿರುವ ಉಮ್ರೆಡ್ ಕಾರ್ಹಾಂಡ್ಲಾ ವನ್ಯಜೀವಿ ಅಭಯಾರಣ್ಯಕ್ಕೆ ಆಗಮಿಸಿದ್ದ ಸಚಿನ್, ಸಿಬ್ಬಂದಿ ವರ್ಗದವರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು ಎಂದು ಸ್ಥಳೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಸಚಿನ್ ಅವರನ್ನು ಅರಣ್ಯ ಸಚಿವ ಸುಧೀರ್ ಮುಂಗಾಟ್ನಿವಾರ್ ಮಹಾರಾಷ್ಟ್ರದ ಹುಲಿ ರಾಯಭಾರಿಯಾಗಲು ಆಹ್ವಾನಿಸಿದ್ದರು. ಇದಕ್ಕೆ ಸಚಿನ್ ತೆಂಡುಲ್ಕರ್ ಸಮ್ಮತಿ ಸೂಚಿಸಿದ್ದರು.
Advertisement