ಏಷ್ಯಾ ಕಪ್ 201- ಬಾಂಗ್ಲಾ ದಾಳಿಗೆ ತತ್ತರಿಸಿದ ಶ್ರೀಲಂಕಾ

ಮೀರ್ ಪುರ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ, ಸಬಿರ್ ರಹ್ಮಾನ್(80)ಅವರ ಅರ್ಧಶತಕ ಮತ್ತು ಸಂಘಟಿತ ಬೌಲಿಂಗ್ ದಾಳಿಯ ...
ಸಬಿರ್ ರಹ್ಮಾನ್
ಸಬಿರ್ ರಹ್ಮಾನ್

ಮೀರ್‌ಪುರ: ಮೀರ್ ಪುರ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ, ಸಬಿರ್ ರಹ್ಮಾನ್(80)ಅವರ ಅರ್ಧಶತಕ ಮತ್ತು ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಬಾಂಗ್ಲಾದೇಶ ಶ್ರೀಲಂಕಾ ವಿರುದ್ಧ 23 ರನ್‌ಗಳ ಜಯ ಗಳಿಸಿ, ಟೂರ್ನಿಯಲ್ಲಿ ಸತತ ಎರಡನೇ ಜಯ ತನ್ನದಾಗಿಸಿಕೊಂಡಿತು.

ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 5ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್‌ಗಳಿಸಿ ಸೋಲೊಪ್ಪಿಕೊಂಡಿತು.

ದಿನೇಶ್ ಚಂಡಿಮಾಲ್(37) ಅವರನ್ನು ಹೊರತುಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸ್ಥಿರ ಪ್ರದರ್ಶನ ಮೂಡಿಬರಲಿಲ್ಲ. ಈ ಸೋಲಿನಿಂದ ಲಂಕಾ ತನ್ನ ಮುಂದಿನ ಹಾದಿಯನ್ನು ದುರ್ಗಮಮಾಡಿಕೊಂಡಿತು. ಇದಕ್ಕೂ ಮುನ್ನ ಸಬಿರ್ ರಹ್ಮಾನ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಬಾಂಗ್ಲಾದೇಶ ತಂಡ 148 ರನ್‌ಗಳ ಪೈಪೋಟಿ ಮೊತ್ತ ಕಲೆಹಾಕಿತು. 2ಕ್ಕೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡ ಆತಿಥೇಯ ಬಾಂಗ್ಲಾಕ್ಕೆ ಆಸರೆಯಾದ ಸಬಿರ್ ಬೌಂಡರಿ, ಸಿಕ್ಸರ್‌ಗಳ ಮೂಲಕ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿದರು.

4ನೇ ವಿಕೆಟ್‌ಗೆ ಶಕಿಬ್ ಅಲ್ ಹಸನ್ ಜತೆಗೆ 11.1 ಓವರ್‌ಗಳಲ್ಲಿ 82 ರನ್ ಸೇರಿಸಿದ ಸಬಿರ್ ವೈಯಕ್ತಿಕವಾಗಿ 54 ಎಸೆತಗಳಲ್ಲಿ 10 ಬೌಂಡರಿ, ಮೂರೂ ಸಿಕ್ಸರ್ ಸಹಿತ 82 ಪೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಕಿಬ್ (32) ಮತ್ತು ಮಹಮ್ಮುದುಲ್ಲಾ ಔಟಾಗದೆ (23)ತಮ್ಮ ಕಾಣಿಕೆ ನೀಡಿದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com