ಶಾಹೀದ್ ಅಫ್ರಿದಿ
ಕ್ರೀಡೆ
ಅಮೀರ್ ಆಯ್ಕೆಗೆ ಅಫ್ರಿದಿ ಬೆಂಬಲ
ಫಿಕ್ಸಿಂಗ್ ಹಗರಣದಲ್ಲಿ ಶಿಕ್ಷೆ ಅನುಭವಿಸಿರುವ ಬ್ಯಾಟ್ಸ್ಮನ್ ಮೊಹಮ್ಮದ್ ಅಮೀರ್ ಅವರಿಗೆ ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿರುವುದನ್ನು ಪಾಕಿಸ್ತಾನ ಟಿ20 ತಂಡದ...
ಕರಾಚಿ: ಫಿಕ್ಸಿಂಗ್ ಹಗರಣದಲ್ಲಿ ಶಿಕ್ಷೆ ಅನುಭವಿಸಿರುವ ಬ್ಯಾಟ್ಸ್ಮನ್ ಮೊಹಮ್ಮದ್ ಅಮೀರ್ ಅವರಿಗೆ ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿರುವುದನ್ನು ಪಾಕಿಸ್ತಾನ ಟಿ20 ತಂಡದ ನಾಯಕ ಶಾಹಿದ್ ಅಫ್ರಿದಿ ಸ್ವಾಗತಿಸಿದ್ದಾರೆ. ಶೀಘ್ರದಲ್ಲೇ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಪ್ರಕಟಗೊಂಡಿರುವ ಪಾಕಿಸ್ತಾನ ತಂಡದಲ್ಲಿ ಅಮೀರ್‍ಗೆ ಸ್ಥಾನ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಫ್ರಿದಿ, 'ರಾಷ್ಟ್ರೀಯ ತಂಡಕ್ಕೆ ಅವರ ಮರುಸೇರ್ಪಡೆಯನ್ನು ನಾವೆಲ್ಲರೂ ಸ್ವಾಗತಿಸೋಣ. ಈ ವಿಚಾರದಲ್ಲಿ ನಾನು ಅವರನ್ನು ಬೆಂಬಲಿಸುತ್ತೇನೆ. ಹಳೆಯ ಕಹಿ ಮರೆತು, ಅಮೀರ್ ಅವರು ಪಾಕಿಸ್ತಾನ ತಂಡಕ್ಕಾಗಿ ತನುಮನ ದುಡಿಯಲೆಂದು ಆಶಿಸುತ್ತೇನೆ'' ಎಂದವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ