ಆಸಿಸ್ ವಿರುದ್ಧದ ಲಕ್ಷ್ಮಣ್ ಆಟ ಸಾರ್ವಕಾಲಿಕ ಶ್ರೇಷ್ಠ

ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಕೋಲ್ಕತಾದ ಈಡನ್ ರ್ಡನ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಭಾರತೀಯ...
ವಿ.ವಿ.ಎಸ್. ಲಕ್ಷ್ಮಣ್
ವಿ.ವಿ.ಎಸ್. ಲಕ್ಷ್ಮಣ್
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಕೋಲ್ಕತಾದ ಈಡನ್ ರ್ಡನ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಭಾರತೀಯ ಆಟಗಾರ ವಿ.ವಿ.ಎಸ್. ಲಕ್ಷ್ಮಣ್  ಅವರು ಸಿಡಿಸಿದ 281 ರನ್‍ಗಳ ಆ ಇನಿಂಗ್ಸ್ ಈಗ ಕಳೆದ `ಅರ್ಧ ಶತಮಾನದಲ್ಲೇ ಶ್ರೇಷ್ಠ ಇನಿಂಗ್ಸ್' ಎಂದು ಪರಿಗಣಿತವಾಗಿದೆ. 
ಇಎಸ್ಪಿಎನ್ ಸಂಸ್ಥೆಯ ಡಿಜಿಟಲ್ ನಿಯತಕಾಲಿಕೆ `ಕ್ರಿಕೆಟ್ ಮಂತ್ಲಿ'ಯು `ಕಳೆದ 50 ವರ್ಷಗಳಲ್ಲಿ ಕ್ರಿಕೆಟ್ ಲೋಕ ಕಂಡ ಅದ್ಭುತ ಇನಿಂಗ್ಸ್' ಎಂಬ ವಿಷಯದಡಿ ಆನ್ಲೈನ್ ಮೂಲಕ ನಡೆಸಿದ ಮತದಾನದಲ್ಲಿ ಭಾಗವಹಿಸಿ ದ್ದ ವಿಶ್ವ ಮಟ್ಟದ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು, ಕ್ರೀಡಾ ಬರಹಗಾರರು, ಕ್ರೀಡಾ ಪ್ರಸಾರ ಹಕ್ಕುದಾರರು, ಕ್ರೀಡಾ ಇತಿಹಾಸಕಾರರು, ಅಂಕಿಅಂಶ ತಜ್ಞರುಳ್ಳ 25 ಜನರ ತಂಡ ಸರ್ವಾನುಮತದಿಂದ ಲಕ್ಷ್ಮಣ್  ಅವರ ಇನಿಂಗ್ಸ್ ಅನ್ನು `ಶ್ರೇಷ್ಠ' ಎಂದು ಆಯ್ಕೆ ಮಾಡಿದೆ. 
ಪಂದ್ಯದ ದಿಕ್ಕು ಬದಲಿಸಿದ್ದ ಇನಿಂಗ್ಸ್: ಮೂರು ಪಂದ್ಯ ಗಳ ಟೆಸ್ಟ್ಗಾಗಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡಿತ್ತು. ಅದು ಈಡನ್ನಲ್ಲಿ ನಡೆದಿದ್ದ ಪಂದ್ಯ. ಅದರಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, ತನ್ನ ಮೊದಲ ಇನಿಂಗ್ಸ್ನಲ್ಲಿ 445 ರನ್ ಮೊತ್ತ ದಾಖಲಿಸಿತ್ತು. ಆ ಮೊತ್ತಕ್ಕೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಭಾರತ, ಕೇವಲ 171 ರನ್‍ಗೆ ಆಲೌಟ್ ಆಗಿತ್ತು. 
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ವಾ, ಭಾರತದ ಮೇಲೆ ಫಾಲೋ ಆನ್ ಹೇರಿದ್ದರು. ಅದೇ ಒತ್ತಡದಲ್ಲಿ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 115 ರನ್ ಮೊತ್ತಕ್ಕೆ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆರಂಭಿಕರಾದ ಶಿವಸುಂದರ್ ದಾಸ್, ಸಡಗೊಪ್ಪನ್ ರಮೇಶ್ ಸೇರಿದಂತೆ, ನಾಲ್ಕನೇ ಕ್ರಮಾಂಕದ ಸಚಿನ್ ತೆಂಡೂಲ್ಕರ್ ಸಹಾ ಪೆವಿಲಿಯನ್‍ಗೆ ಮರಳಿದ್ದರು. ಶಿವಸುಂದರ್ ದಾಸ್ ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‍ಗೆ ಇಳಿದಿದ್ದ ಲಕ್ಷ್ಮಣ್  ನಾಯಕ ಗಂಗೂಲಿ ಜತೆಗೆ 4ನೇ ವಿಕೆಟ್‍ಗೆ 117 ರನ್ ಜತೆಯಾಟವಾಡಿದರು. 
ರಾಹುಲ್ ದ್ರಾವಿಡ್ ಜತೆಗೆ, 5ನೇ ವಿಕೆಟ್‍ಗೆ ಬರೋಬ್ಬರಿ 375 ರನ್ ಜತೆಯಾಟ ನೀಡಿದರು. ರಾಹುಲ್ ಭರ್ಜರಿ 180 ರನ್ ಗಳಿಸಿದರೆ, ಲಕ್ಷ್ಮಣ್  281 ರನ್ ಗಳಿಸಿದರು. ಇವರಿಬ್ಬರ ಈ ಅದ್ಭುತ ಪ್ರದರ್ಶ ನದಿಂದಾಗಿ, ಭಾರತ ತಂಡ ತನ್ನ ಎರಡನೇ ಇನಿಂಗ್ಸ್ನಲ್ಲಿ 657 ರನ್ ಗಳಿಸಿತು. ನಂತರ, ಪಂದ್ಯ ಗೆಲ್ಲಲು 384 ರನ್ ಗುರಿ ಪಡೆದ ಆಸ್ಟ್ರೇಲಿಯಾ, ತನ್ನ ಎರಡನೇ ಇನಿಂಗ್ಸ್ನಲ್ಲಿ 212 ರನ್‍ಗೆ ಆಲೌಟ್ ಆಗುವ ಮೂಲಕ ಭಾರತದ ಎದುರು ಮಂಡಿಯೂರಿತ್ತು. ಇದರಲ್ಲಿ ಲಕ್ಷ್ಮಣ್ ಅವರ ಐತಿಹಾಸಿಕ ಪಂದ್ಯದಲ್ಲಿ ಲಕ್ಷ ್ಮಣ್ ಮತ್ತು ದ್ರಾವಿಡ್ ಪಾತ್ರ ಹಿರಿದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com