ವಿಕೆಟ್ ಕೀಪಿಂಗ್ ಈಗ ತಂತ್ರವಾಗಿ ಉಳಿದಿಲ್ಲ: ಕಿರ್ಮಾನಿ

ಪ್ರಸ್ತುತ ದಿನಗಳಲ್ಲಿ ವಿಕೆಟ್ ಕೀಪಿಂಗ್ ಒಂದು ತಂತ್ರಗಾರಿಕೆಯಾಗಿ ಉಳಿದಿಲ್ಲ. ಆದರೆ ಫಲಿತಾಂಶವನ್ನಷ್ಟೇ ಎದುರು ನೋಡಲಾಗುತ್ತಿದೆ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಶಸ್ತಿ ಸ್ವೀಕರಿಸುತ್ತಿರುವ ಸೈಯದ್ ಕಿರ್ಮಾನಿ
ಪ್ರಶಸ್ತಿ ಸ್ವೀಕರಿಸುತ್ತಿರುವ ಸೈಯದ್ ಕಿರ್ಮಾನಿ

ಮುಂಬೈ: ಪ್ರಸ್ತುತ ದಿನಗಳಲ್ಲಿ ವಿಕೆಟ್ ಕೀಪಿಂಗ್ ಒಂದು ತಂತ್ರಗಾರಿಕೆಯಾಗಿ ಉಳಿದಿಲ್ಲ. ಆದರೆ ಫಲಿತಾಂಶವನ್ನಷ್ಟೇ ಎದುರು ನೋಡಲಾಗುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್  ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಡೆದ 2014-15ನೇ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್‍ಗೆ ಸಲ್ಲಿಸಿದ ಸೇವೆಗಾಗಿ ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ 66
ವರ್ಷದ ಕಿರ್ಮಾನಿ, ``ಧೋನಿ ಒಬ್ಬ ಕೀಪರ್ ಆಗಿ ಅದರ ಜತೆಗೆ ಫಲಿತಾಂಶ ಪಡೆಯುವಲ್ಲಿಯೂ ಯಶ ಕಂಡಿದ್ದಾರೆ. ನಾನು ಆಡುತ್ತಿದ್ದ ದಿನಗಳಲ್ಲಿ ತಂಡಕ್ಕಾಗಿ ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ತ್ರಿವರ್ಣ ಧ್ವಜವು ಹಾರಾಡಬೇಕೆಂಬುದೇ ನನ್ನ ಮನಸ್ಸಿನಲ್ಲಿತ್ತು'' ಎಂದು 88 ಟೆಸ್ಟ್‍ಗಳಲ್ಲಿ 198 ಬಲಿ ಪಡೆದಿರುವ ಕಿರ್ಮಾನಿ ಹೇಳಿದರು. ಅಂದಹಾಗೆ ಪ್ರಶಸ್ತಿಯು ಉಲ್ಲೇಖ ಪತ್ರ, ಟ್ರೋಪಿs ಹಾಗೂ 25 ಲಕ್ಷ
ರೂ. ಚೆಕ್ ಅನ್ನು ಒಳಗೊಂಡಿದೆ. ``ಹೊಸ ವರ್ಷವನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದಿಗೆ ಬರಮಾಡಿಕೊಳ್ಳುತ್ತಿರುವುದು ಟೀಂ ಇಂಡಿಯಾ ಪಾಲಿಗೆ ಮಹತ್ವವೆನಿಸಿದೆ. ಪ್ರಸ್ತುತ ಉಮ್ರಿಗರ್ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ'' ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.

2014-15ನೇ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಸೈಯದ್ ಕಿರ್ಮಾನಿ (ಸಿ.ಕೆ ನಾಯ್ಡು: ಜೀವಮಾನ ಸಾಧನೆ ಪ್ರಶಸ್ತಿ)
ವಿರಾಟ್ ಕೊಹ್ಲಿ (ಪಾಲಿ ಉಮ್ರಿಗರ್)
ಜಲಜ್ ಸಕ್ಸೆನಾ (ಲಾಲಾ ಅಮರ್‍ನಾಥ್: ರಣಜಿ ಆಲ್ರೌಂಡರ್)
ದೀಪಕ್ ಹೂಡಾ (ಲಾಲಾ ಅಮರ್‍ನಾಥ್: ಅತ್ಯುತ್ತಮ ದೇಶೀಯ ಸೀಮಿತ ಓವರ್ ಆಲ್ರೌಂಡರ್)
ರಾಬಿನ್ ಉತ್ತಪ್ಪ (ಮಾಧವ್‍ರಾವ್ ಸಿಂಧ್ಯಾ: ರಣಜಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ)
ಆರ್. ವಿನಯ್ ಕುಮಾರ್ (ಗರಿಷ್ಠ ವಿಕೆಟ್ ಪಡೆದ ಆಟಗಾರ)
ಶಾರ್ದುಲ್ ಠಾಕೂರ್ (ಮಾಧವ್‍ರಾವ್ ಸಿಂಧ್ಯಾ: ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಆಟಗಾರ)
ಅಲ್ಮಸ್ ಶೌಕತ್ (ಎಂ.ಎ.ಚಿದಂಬರಮ್ : 23 ವರ್ಷದೊಳಗಿನಅತ್ಯುತ್ತಮ ಆಟಗಾರ)
ಅನ್ಮೋಲ್‍ಪ್ರೀತ್ ಸಿಂಗ್ (19 ವರ್ಷದೊಳಗಿನ ಅತ್ಯುತ್ತಮ
ಆಟಗಾರ) ಶುಭಂ ಗಿಲ್ (16 ವರ್ಷದೊಳಗಿನ ಅತ್ಯುತ್ತಮ ಆಟಗಾರ)
ಮಿಥಾಲಿ ರಾಜ್ (ಅತ್ಯುತ್ತಮ ಹಿರಿಯ ಮಹಿಳಾ ಆಟಗಾರ್ತಿ)
ದೇವಿಕಾ ವೈದ್ಯ (ಅತ್ಯುತ್ತಮ ಕಿರಿಯ ಮಹಿಳಾ ಆಟಗಾರ್ತಿ)
ಒ. ನಂದನ್ (ದೇಶೀಯ ಕ್ರಿಕೆಟ್‍ನ ಅತ್ಯುತ್ತಮ ಅಂಪೈರ್)
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ( ಅತ್ಯುತ್ತಮ ಸಮಗ್ರ ಪ್ರದರ್ಶನ ಪ್ರಶಸ್ತಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com