ಅಪೂರ್ವಿಗೆ ವಿಶ್ವದಾಖಲೆ ಸ್ವರ್ಣ ಪದಕ

ಭಾರತದ ಮಹಿಳಾ ಶೂಟರ್ ಅಪೂರ್ವಿ ಚಾಂಡೀಲಾ ಸ್ವೀಡಿಷ್ ಕಪ್ ಗ್ರಾಂಡ್ ಪ್ರಿಕ್ಸ್ ಶೂಟಿಂಗ್ ಸ್ಪರ್ಧಾವಳಿಯಲ್ಲಿ ಹೊಚ್ಚ ಹೊಸ ವಿಶ್ವ ದಾಖಲೆಯೊಂದಿಗೆ ಸ್ವರ್ಣ ಪದಕ...
ಅಪೂರ್ವಿ ಚಾಂಡೀಲಾ
ಅಪೂರ್ವಿ ಚಾಂಡೀಲಾ

ನವದೆಹಲಿ: ಭಾರತದ ಮಹಿಳಾ ಶೂಟರ್ ಅಪೂರ್ವಿ ಚಾಂಡೀಲಾ ಸ್ವೀಡಿಷ್ ಕಪ್ ಗ್ರಾಂಡ್ ಪ್ರಿಕ್ಸ್ ಶೂಟಿಂಗ್ ಸ್ಪರ್ಧಾವಳಿಯಲ್ಲಿ ಹೊಚ್ಚ ಹೊಸ ವಿಶ್ವ ದಾಖಲೆಯೊಂದಿಗೆ ಸ್ವರ್ಣ ಪದಕ
ಗೆದ್ದುಕೊಂಡಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್‍ನ ಪದಕ ಸುತ್ತಿನಲ್ಲಿ ಒಟ್ಟು 211.2 ಪಾಯಿಂಟ್ಸ್ ಕಲೆಹಾಕಿದ ಅಪೂರ್ವಿ ಈ ಅಪೂರ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಜಯಿಸಿದರು. ಈ ಹಿಂದೆ ಚೀನಾ ಶೂಟರ್ ಯೀ ಸಿಲಿಂಗ್ ನಿಖರ ಗುರಿಯಿಂದ 211 ಪಾಯಿಂಟ್ಸ್ ಕಲೆಹಾಕಿ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಆದರೆ, ಅಪೂರ್ವಿ ಕೇವಲ 2 ಪಾಯಿಂಟ್ಸ್‍ಗಳಿಂದ ಈ ದಾಖಲೆಯನ್ನು ಅಳಿಸಿ ಹಾಕಿದರು. ಈಗಾಗಲೇ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವ ಅಪೂರ್ವಿ ಈ ಸ್ವೀಡಿಷ್ ಶೂಟಿಂಗ್‍ನ ಆರಂಭದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಈ ವಿಭಾಗದಲ್ಲಿ ಸ್ವೀಡನ್‍ನ ಆಸ್ಟ್ರಿಡ್ ಸ್ಟೀಫನ್‍ಸೆನ್ (207.6) ಮತ್ತು ಸ್ಟಿನಿ ನೀಲ್ಸೆನ್ (185.0) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತರಾದರು. ಅಂದಹಾಗೆ ಕಳೆದ ಏಪ್ರಿಲ್‍ನಲ್ಲಿ ದ. ಕೊರಿಯಾದ ಸಿಯೋಲ್‍ನಲ್ಲಿ ನಡೆದ ಐಎಸ್ ಎಸ್‍ಎಫ್ ವಿಶ್ವ ಕಪ್ ಶೂಟಿಂಗ್‍ನಲ್ಲಿ ಕಂಚಿನ ಪದಕ ಗೆದ್ದುಕೊಳ್ಳುತ್ತಲೇ ಅಪೂರ್ವಿ ರಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com