
ಮೆಲ್ಬೋರ್ನ್: ಟಿವಿ ಸಂದರ್ಶನದ ವೇಳೆ ನಿರೂಪಕಿ ಮೆಲ್ ಮೆಕ್ ಲಾಫ್ಲಿನ್ ಎಂಬಾಕೆಗೆ ಅನುಚಿತ ಹೇಳಿಕೆ ನೀಡಿದ ವಿವಾದಕ್ಕೆ ಗುರಿಯಾಗಿರುವ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಪಂದ್ಯಾವಳಿಯಿಂದ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ. ವಿವಾದದಿಂದ ತಕ್ಷಣದ ಅಮಾನತು ಶಿಕ್ಷೆಯಿಂದ ಪಾರಾದ ಗೇಲ್ ಸಲ್ಲದ ಹೇಳಿಕೆಗೆ ಕ್ಷಮೆ ಯಾಚಿಸಿ 10 ಸಾವಿರ ಅಮೆರಿಕನ್ ಡಾಲರ್ ದಂಡ ತೆತ್ತಿದ್ದಾರೆ. ಆದಾಗ್ಯೂ ಇನ್ನುಳಿದ ಪಂದ್ಯಗಳಲ್ಲಷ್ಟೇ ಅಲ್ಲದೆ, ಬಿಗ್ ಬ್ಯಾಶ್ ಟೂರ್ನಿಯಿಂದಲೇ ನಿಷೇಧಕ್ಕೆ ಗುರಿಯಾಗುವ ಸಂಭವವಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ ವಿಶ್ವಕಪ್ ಟೂರ್ನಿಯಲ್ಲಿ ಯುವತಿಯ ಮುಂದೆ ಬೆತ್ತಲೆಯಾಗಿ ಕಾಣಿಸಿಕೊಂಡಿಲ್ಲ ಎಂದು ಗೇಲ್ ಸ್ಪಷ್ಟಪಡಿಸಿದ್ದಾರೆ.
Advertisement