ಪ್ರಣವ್ ಧನಪಾಡೆಗೆ ಎಂಸಿಎ ವಿದ್ಯಾರ್ಥಿ ವೇತನ

ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಜೇಯ 1009 ರನ್ ಗಳಿಸಿ ಅವಿಸ್ಮರಣೀಯ ವಿಶ್ವ ದಾಖಲೆ ನಿರ್ಮಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ...
ಪ್ರಣವ್ ಧನಪಾಡೆ
ಪ್ರಣವ್ ಧನಪಾಡೆ

ಮುಂಬೈ: ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಜೇಯ 1009 ರನ್ ಗಳಿಸಿ ಅವಿಸ್ಮರಣೀಯ ವಿಶ್ವ ದಾಖಲೆ ನಿರ್ಮಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಮುಂಬೈನ ಪ್ರಣವ್ ಧನಪಾಡೆಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಪ್ರಾಯೋಜಕತ್ವದ ಜತೆಗೆ ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿದೆ. ಆಟೋ ರಿಕ್ಷಾ ಚಾಲಕ ಪ್ರಶಾಂತ್ ಎಂಬುವರ ಪುತ್ರ ಪ್ರಣವ್ ತೋರಿದ ಮಾಂತ್ರಿಕ ಬ್ಯಾಟಿಂಗ್‍ನಿಂದ ಸಂಪ್ರೀತಗೊಂಡಿರುವ ಎಂಸಿಎ ಐದು ವರ್ಷಗಳ ಕಾಲ ಆತನಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದೆ. 'ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಶರದ್ ಪವಾರ್ ಪವನ್ ಧನಪಾಡೆಗೆ ತಿಂಗಳಿಗೆ 10 ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ಘೋಷಿಸಿದ್ದಾರೆ ಅಲ್ಲದೆ, ಜನವರಿ 2016ರಿಂದ ಡಿಸೆಂಬರ್ 2021ರವರೆಗೆ ಈ ಧನ ಸಹಾಯ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಪವನ್ ಧನಪಾಡೆಯ ಶೈಕ್ಷಣಿಕ ವಿದ್ಯಾಭ್ಯಾಸ ಹಾಗೂ ಕ್ರಿಕೆಟ್ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಿದೆ'' ಎಂದು ಎಂಸಿಎ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com