ರಾಜ್ಯಕ್ಕೆ ರೈಲ್ವೇಸ್ ಸವಾಲು

ಉದ್ಯಾನನಗರಿಯಲ್ಲಿ ನಡೆಯುತ್ತಿರುವ 64ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್‍ನಲ್ಲಿ ರಾಜ್ಯದ ಪುರುಷ ಹಾಗೂ ಮಹಿಳೆಯರ ತಂಡಕ್ಕೆ...
ವಾಲಿಬಾಲ್
ವಾಲಿಬಾಲ್

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ 64ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್‍ನಲ್ಲಿ ರಾಜ್ಯದ ಪುರುಷ ಹಾಗೂ ಮಹಿಳೆಯರ ತಂಡಕ್ಕೆ ಪ್ರಬಲ ಇಂಡಿಯನ್ ರೇಲ್ವೇಸ್ ಸವಾಲು ಎದುರಾಗಿದ್ದು, ರಾಜ್ಯಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಇನ್ನು ಗುರುವಾರ ನಡೆದ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಅರ್ಹತಾ ಸುತ್ತಿನ ಪಂದ್ಯ ದಲ್ಲಿ ಹರ್ಯಾಣ ತಂಡವನ್ನು ರಾಜ್ಯದ ವನಿತೆಯರು 30 ಸೆಟ್ಗಳ ಅಂತರದಲ್ಲಿ ಮಣಿಸಿದರು. ಉಭಯ ತಂಡಗಳ ಮೊದಲ ಸೆಟ್ನ ಆರಂಭದಿಂದಲೇ ಹಿಡಿತ ಸಾಧಿಸಿದ ರಾಜ್ಯ ಮಹಿಳಾ ತಂಡ, 2516ರ ಅಂತರ ದಲ್ಲಿ ಜಯಿಸಿತು. ಆದರೆ, ಎರಡನೇ ಗೇಮ್ ನಲ್ಲಿ ಹರ್ಯಾಣ ಪಡೆ ತಿರು ಗೇಟು ನೀಡಲೆತ್ನಿಸಿತು. ಆದರೆ, ಈ ಆಸೆಗೆ ತಣ್ಣೀರೆರೆಚಿದ್ದು ರಾಜ್ಯ ತಂಡ. ಈ ಸೆಟ್‍ನ ಆರಂಭದಲ್ಲಿ ಕೊಂಚ ಮಂದಗತಿಯ ಆಟವಾಡಿದರೂ, ಪ್ರತಿಸ್ಪರ್ಧಿಗಳ ಹಿಡಿತ ಬಿಗಿಯಾಗು ತ್ತಲೇ ಎಚ್ಚೆತ್ತುಕೊಂಡ ರಾಜ್ಯ ವನಿತೆಯರು ಪಂದ್ಯದಲ್ಲಿ ಹಿಡಿತ ಸಾಧಿಸಿ, ಈ ಸೆಟ್ ಅನ್ನೂ ತಮ್ಮದಾಗಿಸಿಕೊಂಡರು. ಇನ್ನು, ಮೂರನೇ ಸೆಟ್ನಲ್ಲಿ ಕರ್ನಾಟಕದ್ದೇ ಪ್ರಾಬಲ್ಯ ಮುಂದುವರಿಯಿತು. ಇತ್ತಂಡಗಳಿಂದ ಮೊದಲ ಸೆಟ್‍ನ ಆಟವೇ ಇಲ್ಲೂ ಪುನರಾವರ್ತನೆಯಾ ಯಿತು. ಈ ಸೆಟ್ನಲ್ಲೂ ದುರ್ಬಲ ಆಟ ಪ್ರದರ್ಶಿಸಿದ ಹರ್ಯಾಣ,1425 ಅಂಕಗಳ ಅಂತ ರದಲ್ಲಿ ಹಿನ್ನಡೆ ಅನುಭವಿಸಿ ಕರ್ನಾಟಕಕ್ಕೆ ಮಣಿಯಿತು. ಮತ್ತೊಂದು ಪಂದ್ಯದಲ್ಲಿ ಆಂಧ್ರಪ್ರದೇಶ ವನಿತೆಯರು ಪಂಜಾಬ್ ವಿರುದ್ಧ 30 ಸೆಟ್ಗಳ ಅಂತರದಲ್ಲಿ ಜಯಿಸಿತು. ಮೊದಲ ಸೆಟ್ನಲ್ಲಿ 2512 ಅಂತರದ ಜಯ ಸಾಧಿಸಿದ ಆಂಧ್ರ, ಆನಂತರದ ಸೆಟ್ಗ ಳಲ್ಲಿ 2514 ಹಾಗೂ 2519 ಅಂತರ ದಲ್ಲಿ ಗೆಲವು ಕಂಡಿತು. ಉ.ಪ್ರದೇಶ ಗೆಲುವು: ಇನ್ನು, ಪುರು ಷರ ವಿಭಾಗದ ರೋಚಕ ಸೆಣಸಾಟದಲ್ಲಿ ಉತ್ತರ ಪ್ರದೇಶ ತಂಡ, ಆಂಧ್ರಪ್ರದೇಶ ತಂಡವನ್ನು 32 ಅಂತರದಲ್ಲಿ ಮಣಿ ಸಿತು. ಮೊದಲ ಸೆಟ್ನಲ್ಲಿ 2125 ಅಂತರದಲ್ಲಿ ಸೋತರೂ, ಉತ್ತರ ಪ್ರದೇಶ ಆಟಗಾರರು ಆನಂತರದ 2ನೇ ಹಾಗೂ 3ನೇ ಸೆಟ್ಗಳಲ್ಲಿ ಸಡ್ಡು ಹೊಡೆದು ಕ್ರಮವಾಗಿ 2521, 2521 ಅಂತರದಲ್ಲಿ ಗೆಲವು ಸಾಧಿಸಿ ದರು. ನಾಲ್ಕನೇ ಸೆಟ್ನಲ್ಲಿ ಪುನಃ ಆಂಧ್ರಪ್ರದೇಶ 1925 ಅಂತರದಲ್ಲಿ ಜಯ ಸಾಧಿಸಿದರು. ಆದರೂ, ಅಂತಿಮ ಸೆಟ್ನಲ್ಲಿ ಪುನಃ ಮೇಲುಗೈ ಸಾಧಿಸಿದ ಉತ್ತರ ಪ್ರದೇಶದ ಆಟಗಾ ರರು, 1511 ಅಂತರದಲ್ಲಿ ಗೆಲವು ಪಡೆದು ಕ್ವಾರ್ಟರ್ ಫೈನಲ್ ಹಂತಕ್ಕೆ ಕಾಲಿರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com