ವನಿತೆಯರಿಗೆ ವಿರೋಚಿತ ಸೋಲು

ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ರಾಜ್ಯ ವನಿತೆಯರು ವಿರೋಚಿತ ಸೋಲು ಕಂಡು ನಿರಾಸೆ ಅನುಭವಿಸಿದರು.
ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ (ಸಂಗ್ರಹ ಚಿತ್ರ)
ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ (ಸಂಗ್ರಹ ಚಿತ್ರ)

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭವಾಗಿರುವ 66 ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ರಾಜ್ಯ ವನಿತೆಯರು ವಿರೋಚಿತ ಸೋಲು ಕಂಡು ನಿರಾಸೆ ಅನುಭವಿಸಿದರು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕದ ಮಹಿಳಾ ತಂಡವು ದಿಟ್ಟ ಹೋರಾಟದ 64- ೬೮ ಪಾಯಿಂಟ್ ಗಳಿಂದ ಪಂಜಾಬ್ ತಂಡದ ಎದುರು ಪರಾಭವಗೊಂಡಿತು.

ಇಲ್ಲಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕಿ ಹೆಚ್.ಎಂ ಬಾಂಧವ್ಯಾ(21 ಪಾಯಿಂಟ್) ಪಂಜಾಬ್ ಆಟಗಾರ್ತಿಯರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೂ. ಆದರೆ ಬಲಿಷ್ಠ ಪಂಜಾಬ್ ವನಿತೆಯರು ವಿರಾಮದ ವೇಳೆಗೆ ಮೇಲುಗೈ ಸಾಧಿಸಿತ್ತು. 37-22 ಪಾಯಿಂಟ್ ಗಳಿಂದ ಮುನ್ನಡೆ ಕಾಯ್ದುಕೊಂಡರಲ್ಲದೆ, ದ್ವಿತಿಯಾರ್ಧದಲ್ಲಿಯೂ ಮಿಂಚಿನ ಆಟವಾಡಿತು. ತ್ವರಿತಗತಿಯಲ್ಲಿ ಪಾಯಿಂಟ್ ಕಲೆಹಾಕಿದ ಪಂಜಾಬ್ ನ ಅರ್ಜಿತ್ ಕೌರ್( 21 ಪಾಯಿಂಟ್) ಇಂದ್ರಕುಮಾರಿ(11 ಪಾಯಿಂಟ್) ಹಾಗೂ ಕಿರಣದೀಪಾ (10 ಪಾಯಿಂಟ್ ) ತಂಡದ ಗೆಲುವಿಗೆ ನೆರವಾದರು.
ಹೊಂದಾಣಿಕೆ ಆಟದಲ್ಲಿ ಎಡವಿದ ಆತಿಥೇಯ ಕರ್ನಾಟಕ ತಂಡದ ಪರ ಲೋಪಮುದ್ರಾ(18 ಪಾಯಿಂಟ್) ಉತ್ತಮ ಪ್ರದರ್ಶನ ನೀಡಿದರು. ಇನ್ನು ಕಳೆದ ಸಾಲಿನ ಚಾಂಪಿಯನ್ ಛತ್ತೀಸಘಡ ಮಹಿಳಾ ತಂಡವು ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿದರೆ, ಛತ್ತೀಸ್ ಘಡ ಮಹಿಳಾ ತಂಡವು 54 -67 ಪಾಯಿಂಟ್ ಗಳಿಂದ ಕೇರಳ ಎದುರು ಸೋಲು ಕಂಡಿತು.

ತಮಿಳುನಾಡು ಶುಭಾರಂಭ: ಇನ್ನು ಪುರುಷರ ವಿಭಾಗದಲ್ಲಿ ತಮಿಳುನಾಡು ತಂಡವು 71 -44 ಪಾಯಿಂಟ್ ಗಳಿಂದ ರೈಲ್ವೆ ತಂಡವನ್ನು ಮಣಿಸುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com