
ಹೈದಾರಾಬಾದ್: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚೆನ್ನೈ ಸ್ಮಾಷರ್ಸ್ ಹಾಗೂ ಹೈದರಾಬಾದ್ ಹಂಟರ್ಸ್ ನಡುವಿನ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಹಣಾಹಣಿಯಲ್ಲಿ ಸ್ಮಾಷರ್ಸ್ ಪಡೆ ಹಂಟರ್ಸ್ ಬಳಗವನ್ನು 4-3 ಸೆಟ್ ಗಳ ಅಂತರದಿಂದ ಸೋಲಿಸಿತು.
ಗಚ್ಚಿಬಾಲಿ ಕ್ರೀಡಾಂಗಣದಲ್ಲಿ ನಡೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ, ಸ್ಮ್ಯಾಷರ್ಸ್ ತಂಡ ಇತ್ತಂಡಗಳ ನಡುವಿನ ಸಿಂಗಲ್ಸ್ ಗಳಲ್ಲೂ ಜಯ ಸಾಧಿಸಿ 3 ಅಂಕಗಳನ್ನು ಗಳಿಸಿತ್ತು.ಇನ್ನು ಹಂಟರ್ಸ್ ತಂಡ ಇತ್ತಂಡಗಳ ನಡುವಿನ ಮತ್ತೊಂದು ಪುರುಷರ ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್ ಪಂದ್ಯವನ್ನು ಗೆದ್ದು 2 ಅಂಕ ಗಳಿಸಿತ್ತು.
ಹಂಟರ್ಸ್ ವತಿಯಿಂದ ಟ್ರಂಪ್ ಪಂದ್ಯವೆಂದು ಆಯ್ಕೆಯಾಗಿದ್ದ ಪುರುಷರ ಡಬಲ್ಸ್ ಪಂದ್ಯದಲ್ಲಿ ಹಂತರ್ಸ್ ನ ಮಾರ್ಕಿಸ್ ಕಿಡೊ-ಕಾರ್ಸ್ ಟನ್ ಮೊಗೆನ್ಸೆನ್ ಜೋಡಿಯು, ಸ್ಮ್ಯಾಷರ್ಸ್ ನ ಕ್ರಿಸ್ ಅಡೋಕ್-ಪ್ರಣವ್ ಚೋಪ್ರಾ ಅವರನ್ನು ಸೋಲಿಸಿ, ತಮ್ಮ ತಂಡಕ್ಕೆ 2 ಬೋನಸ್ ಅಂಕ ತಂದಿತು. ಸ್ಮ್ಯಾಷರ್ಸ್ ತಂಡ ಟ್ರಂಪ್ ಪಂದ್ಯವೆಂದು ನಿರ್ಧರಿಸಿದ್ದ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು, ಸುಪನಿದಾ ವಿರುದ್ಧ ಜಯಿಸಿ ತಮ್ಮ ತಂಡಕ್ಕೆ 2 ಬೋನಸ್ ಅಂಕ ತಂದಿತ್ತರು. ಈ ಎರಡು ಅಂಕಗಳು ಚೆನ್ನೈ ಸ್ಮ್ಯಾಷರ್ಸ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
Advertisement