
ಸಿಡ್ನಿ: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಮತ್ತೊಂದು ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದ್ದು, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸಾನಿಯಾ ಹಾಗೂ ಮಾರ್ಟಿನಾ ಅವರ ಸತತ 29ನೇ ಗೆಲುವು ಇದಾಗಿದೆ. 1992ರಲ್ಲಿದ್ದ ಸತತ ಪಂದ್ಯಗಳಲ್ಲಿ ಗೆಲುವು ಪಡೆದ ದಾಖಲೆ ಸರಿಗಟ್ಟಿದರು. ಅಗ್ರ ಶ್ರೇಯಾಂಕ ಹೊಂದಿರುವ ಸಾನಿಯಾ ಜೋಡಿ ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 4-6, 6-3, 10-8ರ ನೇರ ಸೆಟ್‌ಗಳಿಂದ ರುಮೇನಿಯಾದ ಇಯಾನಾ ರಲುಕಾ ಒಲಾರು ರಷ್ಯಾದ ಯರಸ್ಲೋವಾ ಶ್ವಡೋವಾ ಅವರನ್ನು ಮಣಿಸಿದರು.
ಸೆಮಿ ಫೈನಲ್ ಪಂದ್ಯದಲ್ಲಿ ಗೆಲುವು ಪಡೆಯಲು ಸಾನಿಯಾ ಹಾಗೂ ಮಾರ್ಟಿನಾ ಅವರಿಗೆ ಹೆಚ್ಚು ಕಷ್ಟವಾಗಲಿಲ್ಲ. ಸಾನಿಯಾ ಮತ್ತು ಮಾರ್ಟಿನಾ ಚುರುಕಿನ ಸರ್ವ್‌ಗಳಿಂದ ಎದುರಾಳಿ ಆಟಗಾರ್ತಿಯರ ಸರ್ವ್‌ಗಳನ್ನು ಮುರಿದು ಗೆಲುವಿನ ನಗೆ ಬೀರಿದರು.
ಸಾನಿಯಾ ಹಾಗೂ ಮಾರ್ಟಿನಾ ಕಳೆದ ವರ್ಷದಿಂದ ಒಟ್ಟಾಗಿ ಆಡುತ್ತಿದ್ದು. ಇಲ್ಲಿಯವರೆಗೂ ಒಟ್ಟು ಹತ್ತು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
Advertisement