ಪಿಬಿಎಲ್: ಫೈನಲ್‍ಗೆ ಕಾಲಿಟ್ಟ ಡೆಲ್ಲಿ ಏಸರ್ಸ್

ವಿಶ್ವ ಬ್ಯಾಡ್ಮಿಂಟನ್ನಲ್ಲಿ 11ನೇ ಶ್ರೇಯಾಂಕದಲ್ಲಿರುವ ಟಾಮಿ ಸುಗಿಯಾರ್ತೊ ಅವರ ಪ್ರಚಂಡ ಪ್ರದರ್ಶನದ ಸಹಾಯದಿಂದ ಡೆಲ್ಲಿ ಏಸರ್ಸ್ ತಂಡ, ಬುಧವಾರ ನಡೆದ...
ಟಾಮಿ ಸುಗಿಯಾರ್ತೊ
ಟಾಮಿ ಸುಗಿಯಾರ್ತೊ

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ನಲ್ಲಿ 11ನೇ ಶ್ರೇಯಾಂಕದಲ್ಲಿರುವ ಟಾಮಿ ಸುಗಿಯಾರ್ತೊ ಅವರ ಪ್ರಚಂಡ ಪ್ರದರ್ಶನದ ಸಹಾಯದಿಂದ ಡೆಲ್ಲಿ ಏಸರ್ಸ್ ತಂಡ, ಬುಧವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯಲ್ಲಿ ಚೆನ್ನೈ ಸ್ಮಾಷರ್ಸ್ ತಂಡವನ್ನು 4-3 ಅಂತರದಿಂದ ಸೋಲಿಸಿ,

ಈ ಬಾರಿಯ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಡೆಲ್ಲಿಗೆ ಆರಂಭಿಕ ಮುನ್ನಡೆ: ಇತ್ತಂಡಗಳು ನಡುವೆ ಮೊದಲು ಪುರುಷರ ಡಬಲ್ಸ್ ಪಂದ್ಯ ನಡೆಯಿತು. ಏಸರ್ಸ್ ಪರ ಕಣಕ್ಕಿಳಿದ ಮಲೇಷ್ಯಾ ಮೂಲದ ಕೂ ಕೇಟ್ ಕೀನ್ ಹಾಗೂ ಟ್ಯಾನ್ ಬೂನ್ ಹೆವೊಂಗ್ ಜೋಡಿ, ಸ್ಮಾಷರ್ಸ್ ತಂಡದ ಪ್ರಣವ್ ಚೋಪ್ರಾ ಕ್ರಿಸ್ ಅಡೋಕ್ ಜೋಡಿ ವಿರುದ್ಧ 15-10, 15-14 ಸೆಟ್ಗಳ ಅಂತರದಲ್ಲಿ ಜಯಿಸಿದರು. ಈ ಮೂಲಕ ಏಸರ್ಸ್ 1-0 ಅಂತರದ ಮುನ್ನಡೆ ಸಾಧಿಸಿತು. ಎರಡನೇ ಮುಖಾಮುಖಿಯಾದ ಪುರುಷರ ಸಿಂಗಲ್ಸ್ನಲ್ಲಿ ಏಸರ್ಸ್ ತಂಡದ ಅಜಯï ಜಯರಾಮï, ಡೆಲ್ಲಿ ತಂಡದ ಸೋನಿ ಡ್ವಿ ಕುಂಕೊರೊ ವಿರುದ್ಧ 14-15, 15-10, 15-7 ಅಂತರದಲ್ಲಿ ಜಯಿಸಿ, ಡೆಲ್ಲಿಗೆ 2-0 ಅಂತರ ಮುನ್ನಡೆ ತಂದರು.

ಖಾತೆ ತೆರೆದ ಚೆನ್ನೈ: ಮೂರನೇ ಮುಖಾಮುಖಿಯಾದ ಮಿಶ್ರ ಡಬಲ್ಸ್ನಲ್ಲಿ, ಏಸಸ್ ತಂಡದ ಗ್ಯಾಬ್ರಿಯಲ್ ಅವರು, ಕೀನ್ ಅವರ ಜೊತೆಗೂಡಿ ತಮ್ಮ ಪತಿ ಕ್ರಿಸ್ ವಿರುದ್ಧವೇ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಕ್ರಿಸ್ಪಿಯಾ ಜೆಬಾಡಿ ಜೋಡಿ ಜಯ ಸಾಧಿಸುವ ಮೂಲಕ ಚೆನ್ನೈ ಸ್ಮಾಷರ್ಸ್ ಅಂಕಗಳ ಖಾತೆ ತೆರೆಯಿತು. ಈ ಪಂದ್ಯ ಮುಗಿದಾಗ, ಡೆಲ್ಲಿ ತಂಡ, ಚೆನ್ನೈಗಿಂತ 2-1ರ ಮುನ್ನಡೆ ಹೊಂದಿತ್ತು. ಆನಂತರ, 4ನೇ ಮುಖಾಮುಖಿಯಾದ ಮಹಿಳೆಯರ ಸಿಂಗಲ್ಸ್ ಪಂದ್ಯವನ್ನು ಚೆನ್ನೈ ಸ್ಮಾಷರ್ಸ್ ಟ್ರಂಪ್ ಪಂದ್ಯವೆಂದು ಪರಿಗಣಿಸಿತು. ಈ ಪಂದ್ಯದಲ್ಲಿ ಚೆನ್ನೈ ಪರ ಕಣಕ್ಕಿಳಿದ ಪಿ.ವಿ. ಸಿಂಧು, ಡೆಲ್ಲಿ ತಂಡದ ಪಿ.ಸಿ. ತುಳಸಿ ವಿರುದ್ಧ 15-6, 15-7 ಸೆಟ್ಗಳ ಅಂತರದಲ್ಲಿ ಗೆದ್ದು, ತಮ್ಮ ತಂಡಕ್ಕೆಕ 2 ಅಂಕ ತಂದುಕೊಟ್ಟರು. ಅಲ್ಲಿಗೆ, ಚೆನ್ನೈ ತಂಡ, ಡೆಲ್ಲಿ ಏಸರ್ಸ್ ತಂಡವನ್ನು 32 ಅಂಕಗಳಿಂದ ಹಿಂದಿಕ್ಕಿತು.

ನೆರವಾದ ಸುಗಿಯಾರ್ತೋ: ಇದಾದ ಮೇಲೆ ನಡೆದ ಐದನೇ ಮುಖಾಮುಖಿಯಾದ ಪುರುಷರ ಸಿಂಗಲ್ಸ್ ಪಂದ್ಯವನ್ನು ಏಸಸ್ ತಂಡ, ಟ್ರಂಪ್ ಪಂದ್ಯವೆಂದು ಘೋಷಿಸಿತು. ಈ ಪಂದ್ಯದಲ್ಲಿ ಏಸರ್ಸ್ ಪರ ಕಣಕ್ಕಿಳಿದ ಸುಗಿಯಾರ್ತೋ, ಸ್ಮಾಷರ್ಸ್ ತಂಡದ ಬ್ರಿಸ್ ಲೆವೆರ್ಡೆಸ್ ವಿರುದ್ಧ 15-11, 15-14 ಸೆಟ್ಗಳ ಅಂತರ ದಲ್ಲಿ ಜಯ ಸಾಧಿಸಿ, ತಮ್ಮ ತಂಡಕ್ಕೆ 2 ಅಂಕ ದೊರಕಿಸಿಕೊಟ್ಟರು. ಈ ಅಂಕಗಳಿಂದಾಗಿ ಡೆಲ್ಲಿ ಏಸರ್ಸ್ ತಂಡ, ಚೆನ್ನೈ ತಂಡವನ್ನು 4-3 ಅಂಕಗಳ ಮೂಲಕ ಮಣಿಸಿ, ಫೈನಲ್ ಪ್ರವೇಶಿಸಲು ಸಾಧ್ಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com