ಮ್ಯಾಚ್ ಫಿಕ್ಸಿಂಗ್ ಗಾಗಿ ನನ್ನನ್ನು ಸಂಪರ್ಕಿಸಲಾಗಿತ್ತು: ನೊವಾಕ್ ಜಾಕೋವಿಚ್

ವಿಶ್ವ ಟೆನ್ನಿಸ್ ಕ್ಷೇತ್ರದಲ್ಲೂ ಭಾರೀ ಪ್ರಮಾಣದ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದ ಬೆನ್ನಲ್ಲೇ ಅಗ್ರ ಶ್ರೇಯಾಂಕಿತ ನೊವಾಕ್...
ನೊವಾಕ್ ಜಾಕೋವಿಚ್
ನೊವಾಕ್ ಜಾಕೋವಿಚ್

ಮೆಲ್ಬೋರ್ನ್: ವಿಶ್ವ ಟೆನ್ನಿಸ್ ಕ್ಷೇತ್ರದಲ್ಲೂ ಭಾರೀ ಪ್ರಮಾಣದ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದ ಬೆನ್ನಲ್ಲೇ ಅಗ್ರ ಶ್ರೇಯಾಂಕಿತ ನೊವಾಕ್ ಜಾಕೋವಿಚ್ ಕೋರಿದ್ದರು ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಹಿಯೊಂಗ್ ಚುಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ಬಳಿಕ ನೊವಾಕ್ ಜಾಕೋವಿಚ್ ಹೇಳಿದ್ದಾರೆ.  

ವಿಶ್ವದ 50 ಅಗ್ರ ಶ್ರೇಯಾಂಕದೊಳಗಿನ 16 ಆಟಗಾರರು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದು, ಇದರ ಅಗತ್ಯ ದಾಖಲೆಗಳಿವೆ ಎಂದು ಬಿಬಿಸಿ ಮತ್ತು ಆನ್ ಲೈನ್ ಫೀಡ್ ನ್ಯೂಸ್ ವರದಿ ಮಾಡಿತ್ತು. ಈ ಹಿನ್ನಲೆಯಲ್ಲಿ ನೊವಾಕ್ ಜಾಕೋವಿಚ್ ತನ್ನನ್ನು ಮ್ಯಾಚ್ ಫಿಕ್ಸಿಂಗ್ ಗೆ ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ.

2007ರಿಂದಲೂ ಮ್ಯಾಚ್ ಫಿಕ್ಸಿಂಗ್ ಗೆ ನನ್ನನ್ನು ಕೋರಿದ್ದರು. ಆದರೆ ನೇರವಾಗಿ ಯಾರು ನನ್ನನ್ನು ಕೋರಿಲ್ಲ. ಬದಲಿಗೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದವರ ಮೂಲಕ ಆಹ್ವಾನಿಸಿದ್ದರು. ಕಳೆದ ಆರು ಏಳು ವರ್ಷಗಳ ಹಿಂದಿನ ಸೆಂಟ್ ಪೀಟರ್ಸ್ ಬರ್ಗ್ ಓಪನ್ ಟೂರ್ನಿಯ ಪಂದ್ಯ ವೇಳೆ ಆಹ್ವಾನಿಸದ್ದರು ಎಂದು ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಗಾಗಿ ನೇರವಾಗಿ ನನ್ನನ್ನು ಯಾರು ಆಹ್ವಾನಿಸಿಲ್ಲದ ಕಾರಣ ಏನನ್ನು ಇಲ್ಲಿ ಹೇಳಲು ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com