ಆಸ್ಟ್ರೇಲಿಯನ್ ಓಪನ್ ಟೆನಿಸ್: ಮುನ್ನಡೆ ಸಾಧಿಸಿದ ಶರಪೋವಾ, ಸೆರೆನಾ

ಸರೆನಾ ವಿಲಿಯಮ್ಸ್ ಹಾಗೂ ರಷ್ಯನ್ ರೂಪಸಿ ಮರಿಯಾ ಶರಪೋವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತಮ್ಮ ಗೆಲುವಿನ ಓಟ ಮುಂದುವರೆಸಿದ್ದಾರೆ.
ಮರಿಯಾ ಶರಪೋವಾ
ಮರಿಯಾ ಶರಪೋವಾ

ಮೆಲ್ಬೋರ್ನ್: ವಿಶ್ವದ ಮುಂಚೂನಿ ಟೆನಿಸಿಗ, ಸರ್ಬಿಯಾದ ನೋವಾಕ್ ಜೋಕೊವಿಚ್, ಎರಡನೇ ಶ್ರೇಯಾಂಕಿತ ಸ್ವಿಸ್ ಆಟಗಾರ ರೋಜರ್ ಫೆಡರರ್, ಆಗ್ರಾ ಕ್ರಮಾಂಕಿತೆ ಸರೆನಾ ವಿಲಿಯಮ್ಸ್ ಹಾಗೂ ರಷ್ಯಾದ ಮರಿಯಾ ಶರಪೋವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತಮ್ಮ ಗೆಲುವಿನ ಓಟ ಮುಂದುವರೆಸಿದ್ದಾರೆ.

ಪ್ರತಿಷ್ಠಿತ ಪಂದ್ಯಾವಳಿಯ ಮೂರನೇ ದಿನವಾದ ಬುಧವಾರ ರಾಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 17 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್, ಉಕ್ರೇನ್ ನ ಅಲೆಕ್ಸಾಂಡರ್ ಡೋಲ್ಗೊಪೊಲೋವ್ ಎದುರು 6 -3 7 -5 , 6 -1 ಸೆಟ್ ಗಳಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿದರು.
ಇನ್ನು ಹತ್ತು ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಎಂಬ ಹೆಗ್ಗಳಿಕೆ ಹೊಂದಿರುವ ಜೋಕೊವಿಚ್, ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿಗೆ ಕಾಲಿಟ್ಟರು. ರಾಡ್ ಲೇವರ್ ಅರೇನಾದಲ್ಲಿ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ಹದಿ ಹರೆಯದ ಆಟಗಾರ ಹಾಗೂ ವಿಶ್ವದ 187 ನೇ ಶ್ರೇಯಾಂಕಿತ ಕ್ವೆಂಟಿನ್ ಹ್ಯಾಲಿಸ್ ವಿರುದ್ಧ 6 -1  , 6 -2 ಹಾಗೂ 7 -6 (7 -3 ) ಸೆಟ್ ಗಳ ಅಂತರದಲಿ ಜಯ ಸಾಧಿಸಿದರು. ಅಂತೆಯೇ ಅಮೇರಿಕಾದ ಆಸ್ಟಿನ್ ಕ್ರಾಜಿಸೆಕ್ ವಿರುದ್ಧ 6 -3 , 7 -6 (7 /5 ) ಮತ್ತು 6 -3 ಸೆಟ್ ಗಳ ಅಂತರದಿಂದ ಜಯ ಸಾಧಿಸಿ ಮೂರನೇ ಸುತ್ತಿಗೆ ಧಾವಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com