ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆರೆನಾ- ಮರಿಯಾ ಮುಖಾಮುಖಿ

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆಣೆಸಲು ಸೆರೆನಾ ವಿಲಿಯಮ್ಸ್ ಮರಿಯಾ ಶರಪೋವಾ ಸಜ್ಜಾಗಿದ್ದಾರೆ.
ಮರಿಯಾ ಶರಪೋವಾ- ಸೆರೆನಾ ವಿಲಿಯಮ್ಸ್ (ಸಂಗ್ರಹ ಚಿತ್ರ)
ಮರಿಯಾ ಶರಪೋವಾ- ಸೆರೆನಾ ವಿಲಿಯಮ್ಸ್ (ಸಂಗ್ರಹ ಚಿತ್ರ)

ಮೆಲ್ಬೋರ್ನ್: ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಗಳಾದ ವಿಶ್ವದ ನಂಬರ್ ಆನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ 5 ನೇ ರ್ಯಾಂಕಿಂಗ್ ನ ಮರಿಯಾ ಶರಪೋವಾ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆಣೆಸಲು ಸಜ್ಜಾಗಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಅಮೇರಿಕಾದ ಸೆರೆನಾ ಮತ್ತು ರಷ್ಯಾದ ಶರಪೋವಾ ತಮ್ಮ ಪಂದ್ಯಗಳನ್ನು ಜಯಿಸುವ ಮೂಲಕ ಅಂತಿಮ ಎಂಟರ ಘಟಕ್ಕೆ ಕಾಲಿಟ್ಟಿದ್ದಾರೆ. ಈ ಸುತ್ತಿನಲ್ಲಿ ಮರಿಯಾ ಶರಪೋವಾ ತನ್ನ ಪ್ರತಿಸ್ಪರ್ಧಿ ಸ್ವಿಜರ್ಲೆಂಡ್ ನ 12 ನೇ ರ್ಯಾಂಕಿಂಗ್ ಬೆಲಿಂಡಾ ಬೆನ್ಸಿಕ್ ವಿರುದ್ಧ 7 -5 -7 -5 ಸೆಟ್ ಗಳ ಅಂತರದಲ್ಲಿ ಜಯಿಸಿದರು. ಪಂದ್ಯದಲ್ಲಿ ರಷ್ಯಾ ಆಟಗಾರ್ತಿಗೆ ಪ್ರತಿರೋಧ ನೀಡುವ ಪ್ರಯತ್ನ ಮಾಡಿದರು. ಪಂದ್ಯದ ಎರಡೂ ಸೆಟ್ ಗಳಲ್ಲಿ ಶರಪೋವಾ ಸುಲಭವಾಗಿ ಮೇಲುಗೈ ಸಾಧಿಸಲು ಬಿಡಲಿಲ್ಲ.
ಇನ್ನು ಸೆರೆನಾ ವಿಲಿಯಮ್ಸ್ ತಮ್ಮ ಎದುರಾಳಿ ರಷ್ಯಾದ ಮಾರ್ಗರಿಟಾ ಗಸ್ಟರ್ಯಾನ್ ವಿರುದ್ಧ 6 -2 , 6 -1 ಸೆಟ್ ಗಳ ಅಂತರದಲ್ಲಿ ಜಯಿಸಿದರು. ಪಂದ್ಯದ ಪೂರ್ಣ ಅವಧಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ವಿರುದ್ಧ ಪ್ರಾಬಲ್ಯ ಮೆರೆದ ಸೆರೆನಾ ಪಂದ್ಯವನ್ನು ಸುಲಭವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.
ಜೊಕೋವಿಚ್ ನಿಶಿಕೋರಿ ಸವಾಲು: ಇನ್ನು ಪುರುಷರ ವಿಭಾಗದಲ್ಲಿ ಆಗ್ರಾ ಶ್ರೇಯಾಂಕಿತ ಸರ್ಬಿಯಾದ ನೋವಾಕ್ ಜೋಕೊವಿಚ್ ಅಂತಿಮ ಎಂಟರ ಘಟಕ್ಕೆ ಪ್ರವೇಶಿಸಿದ್ದಾರೆ. ತಮ್ಮ ಮುಂದಿನ ಪಂದ್ಯದಲ್ಲಿ ಜಪಾನ್ ಆಟಗಾರ ಕಿ ನಿಶಿಕೋರಿ ಅವರ ವಿರುದ್ಧ ಸೆಣಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com