ಹೊಸ ಸವಾಲಿನ ಹೊಸ್ತಿಲಲ್ಲಿ ರಾಹುಲ್ ದ್ರಾವಿಡ್ ಶಿಷ್ಯ ಬಳಗ

ಕಿರಿಯರ ಕ್ರಿಕೆಟ್ ಕಲೆಯನ್ನು ಒರೆಗೆ ಹಚ್ಚಲಿರುವ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿಗೆ ಬುಧವಾರ ಚಾಲನೆ ದೊರೆಯಲಿದೆ. ಬಾಂಗ್ಲಾದೇಶ ಆತಿಥ್ಯ ವಹಿಸಲಿರುವ...
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ರಾಹುಲ್ ದ್ರಾವಿಡ್
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ರಾಹುಲ್ ದ್ರಾವಿಡ್

ಢಾಕಾ: ಕಿರಿಯರ ಕ್ರಿಕೆಟ್ ಕಲೆಯನ್ನು ಒರೆಗೆ ಹಚ್ಚಲಿರುವ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿಗೆ ಬುಧವಾರ ಚಾಲನೆ ದೊರೆಯಲಿದೆ.

ಬಾಂಗ್ಲಾದೇಶ ಆತಿಥ್ಯ ವಹಿಸಲಿರುವ ಈ ಟೂರ್ನಿಯ ಮೊದಲ ಹಣಾಹಣಿಯಲ್ಲಿ ಇಂಗ್ಲೆಂಡ್ ಹಾಗೂ ಫಿಜಿ ಮುಖಾಮುಖಿಯಾಗಲಿವೆ. ಟೂರ್ನಿಯ ಆರಂಭಿಕ ದಿನದಿಂದೇ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸೆಣಸಲಿವೆ.
 ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೂರ್ನಿಗೆ ಕಾಲಿಟ್ಟಿರುವ ಭಾರತ ಕಿರಿಯರ ತಂಡ, ನಾಳೆ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈಗಾಗಲೇ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಮೂಲಕ ನಾಲ್ಕು ಬಾರಿ ಪ್ರಶಸ್ತಿ ಗೆದ್ದ ತಂಡವೆಂಬ ಹೆಗ್ಗಳಿಕೆಗೆ ಭಾಜನವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಮರುಕಳಿಸಲಿದೆಯೇ ಕಿರಿಯರ ಸಾಧನೆಯ ಇತಿಹಾಸ?
ಭಾರತದ ಕಿರಿಯ ಕ್ರಿಕೆಟಿಗರಿಗೆ ಇತಿಹಾಸ ನಿರ್ಮಿಸುವ ಮತ್ತೊಂದು ಅವಕಾಶ ಬಂದೊದಗಿದೆ. ಬಹು ನಿರೀಕ್ಷಿತ, 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಜನವರಿ 27ರಿಂದ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಶುರುವಾಗಲಿದೆ. ಭಾರತದ ಹಣಾಹಣಿ 28ರಿಂದ ಆರಂಭವಾಗಲಿದೆ. ಈಗಾಗಲೇ 3 ಬಾರಿ ಈ ಕಪ್ ಗೆದ್ದ ಸಾಧನೆ ಮಾಡಿರುವ ಭಾರತ, ಈ ಬಾರಿ ಅದೇ ಸಾಧನೆಯನ್ನು ಮರುಕಳಿಸುವ ಮೂಲಕ ಅತಿ ಹೆಚ್ಚು ಬಾರಿ ಕಪ್ ಗೆದ್ದ ಸಾಧನೆ ಮಾಡಲಿದೆಯೇ? ಗೊತ್ತಿಲ್ಲ. ಆದರೆ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಖಾಡಕ್ಕಿಳಿದಿದೆ ಎಂಬ ಕಾರಣಕ್ಕೆ ಮಾತ್ರವಲ್ಲ ಹಾಗೂ ತಂಡದಲ್ಲಿರುವ ಕೆಲವಾರು ಉತ್ತಮ ಪ್ರತಿಭೆಗಳ ಮೇಲಿರುವ ಭರವಸೆಯೂ ಈ ಬಾರಿಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com