ಹಾಕಿ ಇಂಡಿಯಾ ಲೀಗ್: ರೇಸ್ ವಿರುದ್ಧ ಮಣಿದ ಡೆಲ್ಲಿ

ತವರಿನ ಅಂಗಣದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಸಂಘಟಿತ ದಾಳಿ ನಡೆಸಿದ ಹಾಲಿ ಚಾಂಪಿಯನ್ ರಾಂಚಿ ರೇಸ್ ತಂಡ ಹಾಕಿ ಇಂಡಿಯಾ ಲೀಗ್...
ಚೆಂಡಿಗಾಗಿ ಸೆಣಸುತ್ತಿರುವ ಆಶ್ಲೆ ಜಾಕ್ಸನ್ ಮತ್ತು ರೂಪಿಂದರ್ ಪಾಲ್ ಸಿಂಗ್
ಚೆಂಡಿಗಾಗಿ ಸೆಣಸುತ್ತಿರುವ ಆಶ್ಲೆ ಜಾಕ್ಸನ್ ಮತ್ತು ರೂಪಿಂದರ್ ಪಾಲ್ ಸಿಂಗ್

ರಾಂಚಿ: ತವರಿನ ಅಂಗಣದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಸಂಘಟಿತ ದಾಳಿ ನಡೆಸಿದ ಹಾಲಿ ಚಾಂಪಿಯನ್ ರಾಂಚಿ ರೇಸ್ ತಂಡ ಹಾಕಿ ಇಂಡಿಯಾ ಲೀಗ್ ನಲ್ಲಿ ಡೆಲ್ಲಿ ವೇವ್ ರೈಡರ್ಸ್ ತಂಡವನ್ನು ಮಣಿಸಿದೆ.

ಮಂಗಳವಾರ ನಡೆದ ಟೂರ್ನಿಯ 9ನೇ ಪಂದ್ಯದಲ್ಲಿ ರಾಂಚಿ ರೇಸ್ ತಂಡ 2-1 ಗೋಲುಗಳ ಅಂತರದಲ್ಲಿ ಡೆಲ್ಲಿ ವೇವ್ ರೈಡರ್ಸ್ ತಂಡವನ್ನು ಮಣಿಸಿತು. ಆ ಮೂಲಕ ರಾಂಚಿ ರೇಸ್ ಸತತ ಎರಡನೇ ಜಯ ಸಾಧಿಸಿದ್ದು, ಡೆಲ್ಲಿ ವೇವ್ ರೈಡರ್ಸ್ ಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ. ಈ ಜಯದೊಂದಿಗೆ 11 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಸೋಲಿನ ಹೊರತಾಗಿಯೂ ಡೆಲ್ಲಿ 11 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಂಚಿ ತಂಡದ ಪರ ನಾಯಕ ಆ್ಯಶ್ಲೆ ಜಾಕ್ಸನ್ 29 ಮತ್ತು 31ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಡೆಲ್ಲಿ ವೇವ್ ರೈಡರ್ಸ್ ತಂಡದ ಪರ ರೂಪಿಂದರ್ ಪಾಲ್ ಸಿಂಗ್ 27ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಪಂದ್ಯದ ಆರಂಭದಲ್ಲಿ ಉತ್ತಮ ನಿಯಂತ್ರಣ ಸಾಧಿಸಿದ್ದ ಡೆಲ್ಲಿ ವೇವ್ ರೈಡರ್ ಮೊದಲು ಗೋಲಿನ ಖಾತೆ ತೆರೆಯಿತು. ಪಂದ್ಯದ ಮೊದಲ ಕ್ವಾರ್ಟರ್ ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್ ನಲ್ಲಿ ರೂಪಿಂದರ್ ಪಾಲ್ ಅವರು ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ ತಿರುಗಿ ಬಿದ್ದ ರಾಂಚಿ ರೇಸ್, ನಾಯಕ ಜಾಕ್ಸನ್ 29ನೇ ಮತ್ತು 31ನೇ ನಿಮಿಷದಲ್ಲಿ ಗೋಲಿನಿಂದ ಜಯಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com