ಫೈನಲ್ ಗೆ ಕಿಡಾಂಬಿ ಶ್ರೀಕಾಂತ್

ಭಾರತದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಪಟು ಕಿಡಾಂಬಿ ಶ್ರೀಕಾಂತ್ ಸೈಯದ್ ಮೋದಿ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ...
ಕಿಡಾಂಬಿ ಶ್ರೀಕಾಂತ್
ಕಿಡಾಂಬಿ ಶ್ರೀಕಾಂತ್
Updated on

ನವದೆಹಲಿ: ಭಾರತದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಪಟು ಕಿಡಾಂಬಿ ಶ್ರೀಕಾಂತ್ ಸೈಯದ್ ಮೋದಿ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಧಾವಿಸಿದ್ದಾರೆ.

120,000 ಡಾಲರ್ ಮೊತ್ತದ ಟೂರ್ನಿಯಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಥಾಯ್ಲೆಂಡ್ ನ ಬೂನ್ಸಾಕ್ ಪೊನ್ಸಾನ ವಿರುದ್ಧ 21-14, 21-7ರಿಂದ ಜಯ ಪಡೆದರು. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ ಶ್ರೀಕಾಂತ್ ಕಾದಾಡಲಿದ್ದಾರೆ.

ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ನಿರಾಸೆ ಅನುಭವಿಸಿತು. ಉಪಾಂತ್ಯದಲ್ಲಿ ಈ ಜೋಡಿ ದ.ಕೊರಿಯಾದ ಜಂಗ್ ಕ್ಯುಂಗ್ ಮತ್ತು ಶಿನ್ ಸೆಯುಂಗ್ ವಿರುದ್ಧ 14-21, 16-21 ರಿಂದ ಸೋಲನುಭವಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com