ಹಾಕಿ ದಂತಕಥೆ ಮೊಹಮದ್ ಶಾಹಿದ್ ನಿಧನ

ಮೂತ್ರಪಿಂಡ ಮತ್ತು ಯಕೃತ್ತು ತೊಂದರೆಯಿಂದ ಬಳಲುತ್ತಿದ್ದ ಹಾಕಿ ದಂತಕಥೆ ಮೊಹಮದ್ ಶಾಹಿದ್ ಗುರುಗಾಂವ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಹಾಕಿ ದಂತಕಥೆ ಮೊಹಮದ್ ಶಾಹಿದ್ (ಚಿತ್ರ ಕೃಪೆ: ದೂರದರ್ಶನ ಟ್ವೀಟ್)
ಹಾಕಿ ದಂತಕಥೆ ಮೊಹಮದ್ ಶಾಹಿದ್ (ಚಿತ್ರ ಕೃಪೆ: ದೂರದರ್ಶನ ಟ್ವೀಟ್)
ನವದೆಹಲಿ: ಮೂತ್ರಪಿಂಡ ಮತ್ತು ಯಕೃತ್ತು ತೊಂದರೆಯಿಂದ ಬಳಲುತ್ತಿದ್ದ ಹಾಕಿ ದಂತಕಥೆ ಮೊಹಮದ್ ಶಾಹಿದ್ ಗುರುಗಾಂವ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. 
1980 ರ ಮಾಸ್ಕೊ ಒಲಂಪಿಕ್ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು ಶಾಹಿದ್.
ಜೀವನ್ಮರಣದ ಜೊತೆಗೆ ಹೋರಾಡುತ್ತಿದ್ದ ಈ ಮೇರು ಆಟಗಾರನಿಗೆ ಜಾಂಡಿಸ್ ಸೋಂಕು ತಗಲಿ ಮತ್ತು ಡೆಂಗ್ಯೂ ಕಾಣಿಸಿಕೊಂಡದ್ದರಿಂದ ಅವರ ಸ್ಥಿತಿ ಉಲ್ಬಣಗೊಂಡಿತ್ತು. 
ಈ ತಿಂಗಳ ಮೊದಲ ಭಾಗದಲ್ಲಿ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಶಾಹಿದ್ ಅವರನ್ನು ವಾರಣಾಸಿಯಿಂದ ವಿಮಾನದ ಮೂಲಕ ಕರೆತಂದು ಗುರಗಾಂವ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
ದೆಹಲಿ ಏಷಿಯಾ ಗೇಮ್ಸ್ 1982 ರಲ್ಲಿ ಬೆಳ್ಳಿ ಪದಕ ಮತ್ತು 1986 ರ ಸಿಯೋಲ್ ಏಶಿಯಾಡ್  ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿಯು ಶಾಹಿದ್ ಆಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com