ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ನಪಾಸಾದವರಿಗೆ ಬದಲಿ ಸಾಧ್ಯವಿಲ್ಲ: ವಿಜಯ್ ಗೋಯೆಲ್

ಒಲಂಪಿಕ್ಸ್ ತಂಡದಲ್ಲಿರುವ ಆಟಗಾರರು ಆಂಟಿ-ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಕಳಿಸುವ ಸೌಲಭ್ಯ ಇಲ್ಲ ಎಂದು ಬುಧವಾರ ಕ್ರೀಡಾ ಸಚಿವ
ಕ್ರೀಡಾ ಸಚಿವ ವಿಜಯ್ ಗೋಯೆಲ್
ಕ್ರೀಡಾ ಸಚಿವ ವಿಜಯ್ ಗೋಯೆಲ್
ನವದೆಹಲಿ: ಒಲಂಪಿಕ್ಸ್ ತಂಡದಲ್ಲಿರುವ ಆಟಗಾರರು ಆಂಟಿ-ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಕಳಿಸುವ ಸೌಲಭ್ಯ ಇಲ್ಲ ಎಂದು ಬುಧವಾರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹೇಳಿದ್ದಾರೆ. 
"ಮೂಲ ಆಟಗಾರ ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ನಪಾಸಾದರೆ ಬದಲಿ ಆಟಗಾರನಿಗೆ ಅವಕಾಶ ಇಲ್ಲ ಎಂದು ತಿಳಿದಿದ್ದೇನೆ" ಎಂದು ಗೋಯೆಲ್ ಸಂಸತ್ತಿನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. 
"ಯಾವುದಾದರೂ ಆಟಗಾರ ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಮಾತ್ರ ಅಂತಹ ಅಸಾಧಾರಣ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಕಳಿಸುವ ಅವಕಾಶ ಇರುತ್ತದೆ" ಎಂದು ಬಿಜೆಪಿ ಪಕ್ಷದ ಮುಖಂಡ ಹೇಳಿದ್ದಾರೆ. 
ಕುಸ್ತಿ ಪಟು ಸರಸಿಂಗ್ ಯಾದವ್ ಅವರು ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದರ ಪರಿಣಾಮ ರಿಯೋ ಒಲಂಪಿಕ್ಸ್ ನಿಂದ ವಜಾಗೊಂಡಿರುವುದರಿಂದ ಅವರ ಬದಲಿಗೆ ಮತ್ತೊಬ್ಬ ಆಟಗಾರನನ್ನು ಕಳುಹಿಸಬಹುದೇ ಎಂಬ ಪ್ರಶ್ನೆಗೆ ಗೋಯೆಲ್ ಪ್ರತಿಕ್ರಿಯಿಸಿದ್ದಾರೆ. 
74 ಕೆಜಿ ಕುಸ್ತಿ ಆಟಕ್ಕೆ ಮಂಗಳವಾರ ನರಸಿಂಗ್ ಬದಲಿಗೆ ಪ್ರವೀಣ್ ಕುಮಾರ್ ರಾಣಾ ಅವರನ್ನು ಹೆಸರನ್ನು ಘೋಷಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com