ಫ್ರೆಂಚ್ ಓಪನ್ ಟೆನಿಸ್: ಜೊಕೊವಿಚ್ ಗೆ ಚಾಂಪಿಯನ್ ಪಟ್ಟ

ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ...
ಜಯದ ಸಂಭ್ರಮದಲ್ಲಿ ವಿಶ್ವದ ನಂಬರ್ ಒನ್ ಟೆನಿಸಿಗ ನೊವಾಕ್ ಜೊಕೊವಿಚ್
ಜಯದ ಸಂಭ್ರಮದಲ್ಲಿ ವಿಶ್ವದ ನಂಬರ್ ಒನ್ ಟೆನಿಸಿಗ ನೊವಾಕ್ ಜೊಕೊವಿಚ್
ಪ್ಯಾರಿಸ್: ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 
ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸಿಗ  ಜೊಕೊವಿಚ್ ಭಾನುವರ ನಡೆದ ಫೈನಲ್ ಪಂದ್ಯದಲ್ಲಿ 3-6,6-1,6-2, 6-4ರಲ್ಲಿ ಬ್ರಿಟನ್ ನ ಆ್ಯಂಡಿ ಮರ್ರೆ ಎದುರು ಜಯ ಪಡೆದರು. 
ಇದು ಅವರ ಮೊದಲ ಫ್ರೆಂಚ್ ಓಪನ್ ಅಗಿದ್ದು, ಬಹುದಿನಗಳ ಕನಸನ್ನು ಅವರು ಪೂರೈಸಿಕೊಂಡಿದ್ದಾರೆ. ಗ್ರ್ಯಾಂಡ್ ಸ್ಲಾಮ್ ನಲ್ಲಿ ಲಭಿಸಿದ ಒಟ್ಟಾರೆ 12ನೇ ಟ್ರೋಫಿ ಇದಾಗಿದೆ. 
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಇಬ್ಬರು ಆಟಗಾರರ ನಡುವಿನ ಪೈಪೋಟಿ ಟೆನಿಸ್ ಪ್ರಿಯರಿಗೆ ರೋಚಕ ಅನುಭವವನ್ನು ನೀಡಿತು. ಮೊದಲ ಸೆಟ್ ನಲ್ಲಿ 3-6 ಅಂತರದಿಂದ ಸೋತರೂ, ಆನಂತರದ ಎರಡೂ ಸೆಟ್ ಗಳಲ್ಲಿ ಅಮೋಘ ಆಟ ಪ್ರದರ್ಶಿಸಿದ ಅವರು ಮರ್ರೆ ಅವರನ್ನು ಮಣಿಸಿದರು.
ಜೊಕೊವಿಚ್ ಒಂದೇ ವರ್ಷದಲ್ಲಿ ನಾಲ್ಕು ಗ್ರ್ಯಾಂಡ್ ಸ್ಲಾಂ ಗೆದ್ದ ಹಿರಿಮೆಗೆ ಭಾಜನರಾಗಿದ್ದಾರೆ. 1969ರಲ್ಲಿ ರಾಡ್ ಲೆವರ್ ಮಾಡಿದ್ದ ಸಾಧನೆಗೆ ಸಮವಾಗಿದೆ. 
ಇದು ನನ್ನ ಬದುಕಿನ ಅತ್ಯಂತ ವಿಶೇಶ ಕ್ಷಣ. ಫ್ರೇಂಚ್ ಟೂರ್ನಿಯಲ್ಲಿ ಜಯಗಳಿಸಬೇಕು ಎನ್ನುವ ನನ್ನ ಕನಸು ನನಸಾಗಿದೆ. ರೊಲ್ಯಾಂಡ್ ಗ್ಯಾರೋಸ್ ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಬೇಕೆನ್ನುವ ನನ್ನ ಬಹು ವರ್ಷಗಳ ಆಸೆ ಈಗ ನೆರವೇರಿದೆ ಎಂದು ವಿಶ್ವದ ನಂಬರ್ ಒನ್ ಟೆನಿಸಿಗ ಜೊಕೊವಿಚ್ ಸಂತಸ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com