
ನವದೆಹಲಿ: ರಿಯೊ ಒಲಿಂಪಿಕ್ಸ್‌ಗೆ ನನಗೆ ವೈಲ್ಡ್ ಕಾರ್ಡ್ ಪ್ರವೇಶ ಕೊಡಿಸುವ ಸಲುವಾಗಿ ಭಾರತ ಬಾಕ್ಸಿಂಗ್ ಆಡಳಿತ ಸಾಕಷ್ಟು ಪ್ರಯತ್ನಿಸುತ್ತಿದೆ. ನಿಜವಾಗಿ ಹೇಳಬೇಕೆಂದರೆ ಈಗ ನನ್ನ ಕೈಯಲ್ಲಿ ಏನೂ ಇಲ್ಲ. ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ವೈಲ್ಡ್ ಕಾರ್ಡ್ ಕೊಟ್ಟರಷ್ಟೇ ಮತ್ತೊಂದು ಪದಕ ಜಯಿಸಲು ಅವಕಾಶ ಲಭಿಸುತ್ತದೆ ಎಂದು ವಿಶ್ವ ಬಾಕ್ಸಿಂಗ್ ಚ್ಯಾಂಪಿಯನ್ ಮೆರಿ ಕೋಮ್ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಗೆಲ್ಲಬೇಕೆನ್ನುವ ಆಸೆಯಿಂದ ಅಭ್ಯಾಸ ನಡೆಸಲು ಸಾಕಷ್ಟು ತಿರು ಗಾಡಿದೆ. ಶಕ್ತಿ ಮೀರಿ ಅಭ್ಯಾಸ ಮಾಡಿದೆ. ಆದರೆ ಒಲಿಂಪಿಕ್ಸ್‌ಗೆ ಅರ್ಹತೆ ಯನ್ನೇ ಪಡೆಯಲು ಸಾಧ್ಯವಾಗಲಿಲ್ಲ. ಆ ಒಂದು ಸೋಲು ಸಾಕಷ್ಟು ಹೈರಾಣ ಮಾಡಿದೆ. ಈಗ ಅದೃಷ್ಟವೇ ನನ್ನ ಕೈ ಹಿಡಿಯಬೇಕು ಎಂದು ನುಡಿದ್ದಾರೆ.
ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನ 51 ಕೆ.ಜಿ ಫ್ಲೈವೇಟ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿ ದ್ದರು. ಈ ಬಾರಿಯ ಒಲಿಂಪಿಕ್ಸ್‌ಗೆ ಅರ್ಹತೆಯ ಸಲುವಾಗಿ ಕಜಕಸ್ತಾನದಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್‌ನ ಎರಡನೇ ಸುತ್ತಿನಲ್ಲಿ ಜರ್ಮನಿ ಯ ಅಜಿಜೆ ನಿಮಾನಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.
ನನಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಿಸಲು ಭಾರತ ಒಲಿಂಪಿಕ್ಸ್ ಸಂಸ್ಥೆ ಪ್ರಯತ್ನಿಸುತ್ತಿದೆ. ಈ ತಿಂಗಳಲ್ಲಿ ಅರ್ಜಿ ಸಲ್ಲಿಸುತ್ತದೆ. ಪ್ರವೇಶ ಲಭಿಸ ಬಹುದು ಎನ್ನುವ ನಂಬಿಕೆಯಿಂದಲೇ ಅಭ್ಯಾಸ ಮುಂದುವರಿಸಿದ್ದೇನೆ. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಶಕ್ತಿ ಮೀರಿ ಸಾಮರ್ಥ್ಯ ತೋರಿಸಿದ್ದೇನೆ. ಆದರೆ ಫಲಿತಾಂಶ ನನ್ನ ಕೈಯಲ್ಲಿ ಇರಲಿಲ್ಲ ಎಂದು ಹೇಳಿದರು.
Advertisement