ಡ್ರಗ್ ಪರೀಕ್ಷೆಯಲ್ಲಿ ವಿಫಲ: ಶರಪೋವಾಗೆ ಎರಡು ವರ್ಷ ಅಮಾನತು

ಪಂದ್ಯಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ ಅವರಿಗೆ...
ಮರಿಯಾ ಶರಪೋವಾ
ಮರಿಯಾ ಶರಪೋವಾ
Updated on

ಲಂಡನ್‌: ಪಂದ್ಯಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ ಅವರಿಗೆ ಅಂತರ ರಾಷ್ಟ್ರೀಯ ಟೆನಿಸ್‌ ಫೆಡರೇಷನ್‌  ಎರಡು ವರ್ಷ ಆಟದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ.
 
29 ವರ್ಷ ಹರೆಯದ ಶರಪೋವಾ ಹೃದಯ ಕಾಯಿಲೆಗೆ 2006ರಿಂದ ಡ್ರಗ್ ಸೇವಿಸುತ್ತಿದ್ದುದಾಗಿ   ಇತ್ತೀಚೆಗೆ ತಪ್ಪೊಪ್ಪಿಕೊಂಡಿದ್ದರು. ಈ ವರ್ಷ ಜನವರಿಯಿಂದ ಅನ್ವಯವಾಗುವಂತೆ ನಿಷೇಧ ಜಾರಿಗೆ ಬರಲಿದೆ. ಅಮಾನತಿನ ವಿರುದ್ಧ ಶರಪೋವಾ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿದ್ದಾರೆ.

ಶರಪೋವಾ, ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಒಂದು, ಫ್ರೆಂಚ್‌ ಓಪನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡು ಸಲ ಚಾಂಪಿಯನ್‌ ಆಗಿದ್ದಾರೆ. 2004ರ ವಿಂಬಲ್ಡನ್‌ ಮತ್ತು 2006ರ ಅಮೆರಿಕ ಓಪನ್‌ ಟೂರ್ನಿ ಗಳಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು.

ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌  ಟೂರ್ನಿಯ ವೇಳೆ ಗೊತ್ತಿಲ್ಲದೇ ಮೆಲ್ಡೋನಿಯಮ್‌ ಸೇವಿಸಿದ್ದೆ ಎಂದು ಇದೇ ವರ್ಷದ ಜನವರಿಯಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಶರಪೋವಾ ಬಹಿರಂಗಗೊಳಿಸಿದ್ದರು. ಆದ್ದರಿಂದ ಅಂತರ ರಾಷ್ಟ್ರೀಯ ಟೆನಿಸ್‌ ಫೆಡರೇಷನ್  ಮಾರ್ಚ್‌ನಲ್ಲಿಯೇ ಅವರನ್ನು ಅಮಾನತು ಮಾಡಿತ್ತು. ಆದರೆ ಎಷ್ಟು ವರ್ಷ ಅಮಾನತು ಎಂಬುದನ್ನು ತಿಳಿಸಿರಲಿಲ್ಲ.

ವಿಶ್ವ ಉದ್ದೀಪನಾ ಮದ್ದು ತಡೆಘಟಕದ ನಿಯಮಾವಳಿಯ ಪ್ರಕಾರ  ಮೆಲ್ಡೋನಿಯಮ್ ಅನ್ನು ಸೇವಿಸ ಬಾರದು  ಎನ್ನುವ ವಿಷಯ  ನನಗೆ ಗೊತ್ತಿರಲಿಲ್ಲ ಎಂದು ಶರಪೋವಾ ಹೇಳಿದ್ದರು.

ರಷ್ಯಾದ ಈ ಆಟಗಾರ್ತಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿದ್ದರು.  ವಿಂಬಲ್ಡನ್‌ ಟೂರ್ನಿ ಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದಾಗ ಅವರಿಗೆ 17 ವರ್ಷವಾಗಿತ್ತು. 18ನೇ ವಯಸ್ಸಿಗೆ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ಅಮೆರಿಕ ಓಪನ್‌ನಲ್ಲಿ  ಪ್ರಶಸ್ತಿ ಗೆದ್ದಾಗ ಅವರಿಗೆ 19 ವರ್ಷ. ನಂತರದ ವರ್ಷದಲ್ಲಿಯೇ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಬಲಗೈ ಭುಜದ ನೋವಿಗೆ ಒಳಗಾಗಿದ್ದ ಕಾರಣ ಸಾಕಷ್ಟು ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಇದರಿಂದ  ನೂರಕ್ಕಿಂತಲೂ ಹೆಚ್ಚು  ರ್‍ಯಾಂಕ್‌ಗೆ ಕುಸಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com