ಮೇರಿಕೋಮ್ ಗೆ ನಿರಾಸೆ, ರಿಯೋಗೆ ವೈಲ್ಡ್ ಕಾರ್ಡ್ ಮನವಿ ತಿರಸ್ಕರಿಸಿದ ಐಒಸಿ

ಭಾರತದ ಖ್ಯಾತ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಎಂ.ಸಿ. ಮೇರಿಕೋಮ್ೆ ಅವರ ರಿಯೋ ಒಲಿಂಪಿಕ್ಸ್​ಕನಸು ಭಗ್ನವಾಗಿದೆ....
ಮೇರಿಕೋಮ್
ಮೇರಿಕೋಮ್
ನವದೆಹಲಿ: ಭಾರತದ ಖ್ಯಾತ ಬಾಕ್ಸರ್  ಹಾಗೂ ಒಲಿಂಪಿಕ್ ಪದಕ ವಿಜೇತೆ ಎಂ.ಸಿ. ಮೇರಿಕೋಮ್ೆ ಅವರ ರಿಯೋ ಒಲಿಂಪಿಕ್ಸ್​ಕನಸು ಭಗ್ನವಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿಗೆ ಮೇರಿಕೋಮ್ ಮಾಡಿದ್ದ ಮನವಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ತಿರಸ್ಕರಿಸಿದೆ.
ಐಒಸಿಯ ಈ ನಿರ್ಧಾರದಿಂದಾಗಿ ಮೇರಿ ಕೋಮ್ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಅಪಾರ ಅಭಿಮಾನಿಗಳಿಗೆ ತೀವ್ರ ನಿರಾಸೆ ಆಗಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಬಾಕ್ಸಿಂಗ್ ಅಸೋಸಿಯೇಷನ್ ತಾತ್ಪೂರ್ತಿಕ ಸಮಿತಿ ಅಧ್ಯಕ್ಷ ಕಿಶನ್ ನರ್ಸಿ ಅವರು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೇರಿಕೋಮ್ ಅವರಿಗೆ ವೈಲ್ಡ್​ಕಾರ್ಡ್ ಎಂಟ್ರಿ ನಿರಾಕರಣೆ ಮಾಡಿರುವುದು ಬೇಸರ ತಂದಿದೆ. ಒಲಿಂಪಿಕ್ ನಿಯಮದ ಪ್ರಕಾರ ಒಂದು ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಎಂಟಕ್ಕೂ ಅಧಿಕ ಬಾಕ್ಸರ್​ಗಳಿಗೆ ಅವಕಾಶ ನೀಡುವ ಹಾಗಿಲ್ಲ ಎನ್ನುವುದು ಸಮಿತಿಯ ವಾದವಾಗಿದೆ ಎಂದು ತಿಳಿಸಿದರು.
ಇನ್ನು ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ 33 ವರ್ಷದ ಮೋರಿಕೋಮ್  ಅವರು, ಈ ತೀರ್ಪಿನಿಂದ ನನ್ನ ಕನಸುಗಳು ಕಳಚುವುದಿಲ್ಲ. ಇದು ನನಗೆ ಆಘಾತ ನೀಡಿದೆ. ಹಾಗಂತ ಬಾಕ್ಸಿಂಗ್ ರಿಂಗ್​ನಿಂದ ಕೆಳಗಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
ರಿಯೋ ಒಲಿಂಪಿಕ್​ಗಾಗಿ ನಡೆದ ಅರ್ಹತಾ ಪಂದ್ಯಗಳಲ್ಲಿ ಐದು ಬಾರಿ ವಿಶ್ವಚಾಂಪಿಯನ್ ಮೇರಿಕೋಮ್ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com