ಅರ್ಜೆಂಟಿನಾ ಸೋಲಿಗೆ ಕಾರಣವಾದ ಪೆನಾಲ್ಟಿ ಕಿಕ್; ಮೆಸ್ಸಿ ಮಿಸ್ ಮಾಡಿದ್ದು ಹೀಗೆ

ಆರ್ಟುರೊ ವಿಡಾಲ್ ನ ಪೆನಾಲ್ಟಿ ಶೂಟೌಟ್ ನ್ನು ಅರ್ಜೆಂಟೀನಾದ ಗೋಲ್ ಕೀಪರ್ ಸೆರ್ಗಿಯೋ ರೊಮೆರೊ ತಡೆದ ನಂತರ ಅರ್ಜೆಂಟೀನಾದ ಅಭಿಮಾನಿಗಳು ಹರ್ಷೋದ್ಘಾರದಲ್ಲಿ ಮುಳುಗಿದ್ದರು...
ಆರ್ಜಿಎಂಟಿನಾ ಸೋಲಿಗೆ ಕಾರಣವಾದ ಪೆನಾಲ್ಟಿ ಕಿಕ್ ನ್ನು ಮೆಸ್ಸಿ ಮಿಸ್ ಮಾಡಿದ್ದು ಹೀಗೆ
ಆರ್ಜಿಎಂಟಿನಾ ಸೋಲಿಗೆ ಕಾರಣವಾದ ಪೆನಾಲ್ಟಿ ಕಿಕ್ ನ್ನು ಮೆಸ್ಸಿ ಮಿಸ್ ಮಾಡಿದ್ದು ಹೀಗೆ

ಫುಟ್ ಬಾಲ್ ಕ್ರೀಡಾ ಜಗತ್ತಿನ ಶ್ರೇಷ್ಠ ಆಟಗಾರ ಎಂದೇ ಗುರುತಿಸಲಾಗುವ ಆರ್ಜಿಎಂಟಿನಾದ ಲಿಯೊನೆಲ್ ಮೆಸ್ಸಿ ಚಿಲಿ ವಿರುದ್ಧದ ಕೋಪಾ ಅಮೆರಿಕಾ 2016 ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಕಿಕ್ ನ್ನು ಯಶಸ್ವಿಗೊಳಿಸಲು ಸಾಧ್ಯವಾಗದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಘೋಷಿಸಿದ್ದಾರೆ.

ಅರ್ಜೆಟೀನಾ ತಂಡಕ್ಕೆ ಒಮ್ಮೆಯೂ ಟ್ರೋಫಿಯನ್ನು ಗೆದ್ದುಕೊಡಲು ಸಫಲರಾಗದ ಮೆಸ್ಸಿ, ಕೋಪಾ ಅಮೆರಿಕ 2016 ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಕಿಕ್ ಗೋಳನ್ನು ಗಳಿಸಲು ಸಾಧ್ಯವಾಗದ ಕಾರಣ ಅರ್ಜೆಂಟಿನಾದ ಟ್ರೋಫಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.  ಆರ್ಟುರೊ ವಿಡಾಲ್ ನ ಪೆನಾಲ್ಟಿ ಶೂಟೌಟ್ ನ್ನು ಅರ್ಜೆಂಟೀನಾದ ಗೋಲ್ ಕೀಪರ್  ಸೆರ್ಗಿಯೋ ರೊಮೆರೊ ತಡೆದ ನಂತರ ಅರ್ಜೆಂಟೀನಾದ ಅಭಿಮಾನಿಗಳು ಹರ್ಷೋದ್ಘಾರದಲ್ಲಿ ಮುಳುಗಿದ್ದರು. ಇದೆ ಜೋಶ್ ನಲ್ಲಿ  ಅರ್ಜೆಂಟೀನಾದ ಪರ ಪೆನಾಲ್ಟಿ ಶೂಟೌಟ್ ಗೆ ಮುಂದಾದ ಮೆಸ್ಸಿ ಎಡಗಾಲಿನಿಂದ ಚೆಂಡನ್ನು ಹೊಡೆದರಾದರೂ, ಅದು ಗೋಲ್ ಒಳಗೆ ಬೀಳದೆ ಗೋಲ್ ನ ಕ್ರಾಸ್ ಬಾರ್ ಮೇಲಿಂದ ಹಾದು ಹೋಯಿತು. ಅಚ್ಚರಿಯ ವಿಷಯವೆಂದರೆ ಫುಟಬಾಲ್ ನ ಶ್ರೇಷ್ಠ ಆಟಗಾರನಾಗಿರುವ ಮೆಸ್ಸಿ, ತಮ್ಮ ವೃತ್ತಿ ಜೀವನದಲ್ಲಿ ಪೆನಾಲ್ಟಿ ಶೂಟೌಟ್ ಮಿಸ್ ಮಾಡಿಸುವುದು ಇದೆ ಮೊದಲ ಬಾರಿಯಂತೆ!


ಮೆಸ್ಸಿ ಪೆನಾಲ್ಟಿ ಶೂಟೌಟ್ ಗಳಿಸಲು ವಿಫಲರಾಗುವುದಕ್ಕೂ ಮುನ್ನ ಮಿಡ್ ಫಿಲ್ಡರ್ ಆಗಿರುವ ವಿಡಾಲ್ ಸಹ ತಮ್ಮ ತಂಡದ ಮೊದಲ ಪೆನಾಲ್ಟಿ ಶೂಟೌಟ್ ನ್ನು ಗಳಿಸಲು ವಿಫಲರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com