ಧರ್ಮಶಾಲಾದಲ್ಲಿ ನಡೆಯುವ ಭಾರತ-ಪಾಕ್ ಪಂದ್ಯಕ್ಕೆ ಅರೆಸೇನಾ ಪಡೆ ರಕ್ಷಣೆ

ತೀವ್ರ ಅನಿಶ್ಚಿತತೆ ನಡುವೆಯೇ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಹಿಮಾಚಲ ಪ್ರದೇಶದ....
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ನವದೆಹಲಿ: ತೀವ್ರ ಅನಿಶ್ಚಿತತೆ ನಡುವೆಯೇ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿಗದಿಯಾಗಿದ್ದು, ಮಾರ್ಚ್ 19ರಂದು ನಡೆಯುವ ಪಂದ್ಯಕ್ಕೆ ಅರೆಸೇನಾ ಪಡೆ ನಿಯೋಜಿಸಿ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಒಂದು ವೇಳೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಭದ್ರತಾ ಪಡೆ ಒದಗಿಸುವಂತೆ ಕೇಳಿಕೊಂಡರೆ, ಪಂದ್ಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ.
ಪಠಾಣಕೋಟ್ ದಾಳಿಯನ್ನು ಖಂಡಿಸಿ ಮಾರ್ಚ್ 19 ರಂದು ನಡೆಯಲಿರುವ ಪಂದ್ಯ ನಿಷೇಧಿಸುವಂತೆ ಮಾಜಿ ಸೈನಿಕರು ಆಗ್ರಹಿಸಿದ್ದಾರೆ. ಜತೆಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಮಾಜಿ ಸೈನಿಕರ ವಿರೋಧವಿರುವುದರಿಂದ ರಾಜ್ಯದಿಂದ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಬಿಸಿಸಿಐ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಅನುರಾಗ್ ಕಶ್ಯಪ್ ಹಿಮಾಚಲ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಶಹರ್ಯಾರ್ ಖಾನ್ ಪಾಕಿಸ್ತಾನ ಆಟಗಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com