ಅಭಿಮಾನಿಗಳಿಗೆ ಪತ್ರ ಬರೆದ ಮಾರಿಯಾ ಶರಪೋವಾ

ಡ್ರಗ್ ಪರೀಕ್ಷೆಯಲ್ಲಿ ವಿಫಲಾರಾದ ಟೆನಿಸ್ ತಾರೆ ಮಾರಿಯಾ ಶರಪೋವ, ಅಂತರ್ಜಾಲದಲ್ಲಿ ವಿಶ್ವದ ಎಲ್ಲ ಮೂಲೆಗಳಿಂದ ಒಂದು ಕಡೆ ನೋವಿನ ಮಾತುಗಳನ್ನು ಕೇಳಿಸಿಕೊಳ್ಳಬೇಕಾದರೆ ಮತ್ತೊಂದು
ಟೆನಿಸ್ ತಾರೆ ಮಾರಿಯಾ ಶರಪೋವ
ಟೆನಿಸ್ ತಾರೆ ಮಾರಿಯಾ ಶರಪೋವ

ಡ್ರಗ್ ಪರೀಕ್ಷೆಯಲ್ಲಿ ವಿಫಲಾರಾದ ಟೆನಿಸ್ ತಾರೆ ಮಾರಿಯಾ ಶರಪೋವ, ಅಂತರ್ಜಾಲದಲ್ಲಿ ವಿಶ್ವದ ಎಲ್ಲ ಮೂಲೆಗಳಿಂದ ಒಂದು ಕಡೆ ನೋವಿನ ಮಾತುಗಳನ್ನು ಕೇಳಿಸಿಕೊಳ್ಳಬೇಕಾದರೆ ಮತ್ತೊಂದು ಬದಿಯಿಂದ ಗೆಳೆಯರು ಮತ್ತು ಅಭಿಮಾನಿಗಳು ಪ್ರೀತಿಯ ಹೊಳೆ ಹರಿಸಿ ಧೈರ್ಯ ತುಂಬಿದ್ದಾರೆ.

ಈ ಅಭಿಮಾನಿಗಳ, ಗೆಳೆಯರ ಪ್ರೀತಿಗೆ ಪ್ರತಿಯಾಗಿ ಮಾರಿಯಾ ಶರಪೋವಾ ತಮ್ಮ ಅಭಿಮಾನಿಗಳ ಫೇಸ್ಬುಕ್ ಪುಟದಲ್ಲಿ ಪತ್ರ ಬರೆದಿದ್ದು, ಅದು ಇಂತಿದೆ.

ನಾನು ಬೆಳಗ್ಗೆ ಎದ್ದಾಗ ನನ್ನ ಇನ್ಬಾಕ್ಸ್ ತುಂಬ ಪ್ರೀತಿ ಮತ್ತು ಒಲವಿನ ಸಂದೇಶಗಳು ತುಂಬಿದ್ದವು.

ಮೊದಲ ಈಮೇಲ್ ತಕ್ಷಣ ತೆರೆದು ನೋಡಿದೆ. ಅವರ ಒಂದು ಶಬ್ದದಿಂದ ನನ್ನನ್ನು ನಗುವಂತೆ-ಅಳುವಂತೆ ಮಾಡಬಲ್ಲ, ನಾನು ಸಂಜೆಯ ವೇಳೆ ಫೋನಿನಲ್ಲಿ ಮಾತನಾಡುವ ಆತ್ಮೀಯ ಗೆಳೆಯರ ಇಮೇಲ್ ಅದು. ಅವರು ನಾನು ಹೇಗಿದ್ದೀನಿ ಅಂತ ಕೇಳಿದ್ದರು.

ನನಗೆ ಸಾಮಾನ್ಯವಾಗಿ ಬೆಳಗಿನ ಜಾವ ಇಷ್ಟ. ಹೊಸ ದಿನ, ಹೊಸ ಪ್ರಾರಂಭ. ಆದರೆ ಈ ದಿನ ಸಾಮಾನ್ಯವಾದದ್ದಲ್ಲ. ಬೆಳಗ್ಗೆ ೬ಕ್ಕೆ ತಲೆಯಲ್ಲಿ ಏನೂ ಇರಲಿಲ್ಲ ಆದರೆ ನಾನು ಮತ್ತೆ ಟೆನಿಸ್ ಆಡುತ್ತೇನೆಂಬ ಭರವಸೆ ಮಾತ್ರ ಉಳಿದಿತ್ತು ಮತ್ತು ಅದಕ್ಕೆ ಅವಕಾಶ ಕೂಡ ಇದೆ ಎಂಬ ಭರವಸೆಯಿಂದಿದ್ದೇನೆ. ಇದು ನನಗೆ ಆಗಬಾರದಿತ್ತು ಆದರೆ ಆಗಿದೆ ಇದನ್ನು ನಿಭಾಯಿಸುತ್ತೇನೆ.

ನನ್ನ ಜೀವನದಲ್ಲಿ ಪಾಲಿಸಿಕೊಂಡು ಬಂದಿರುವಂತೆ ನನಗೆ ವ್ಯಾಯಾಮ ಬೇಕಾಗಿತ್ತು, ಬೆವರು ಸುರಿಸಬೇಕಿತ್ತು ಆದುದರಿಂದ ಜಿಮ್ ಕಡೆಗೆ ಹೊರಟೆ. ಆದರೆ ಟಿಂಟೆಂಡ್ ಗಾಜುಳ್ಳ ಕೆಲವು ಕಾರುಗಳು ನನ್ನನ್ನು ಹಿಂಬಾಲಿಸುತ್ತಿದ್ದವು. ಫೋಟೋಗ್ರಾಫರ್ ಗಳು ನನ್ನ ಬೆನ್ನಟ್ಟಿದ್ದರು.

ಒಂದು ಅಪೂರ್ವ ಕಾಫಿ ಮೇಜು ಹುಡುಕಲು ಬಿಟ್ಟರೆ ಅಂತರ್ಜಾಲದಲ್ಲಿ ಕಾಲ ಕಳೆಯಲಿಲ್ಲ. ಆದರೆ ನಿಮ್ಮ ಎಲ್ಲ ಸುಂದರ ಸಂದೇಶಗಳು, ಹ್ಯಾಶ್ ಟ್ಯಾಗ್ ಗಳನ್ನು ಸೇರಿಸಿ (#ನಾನು ಮಾರಿಯಾ ಜೊತೆ ನಿಲ್ಲುತ್ತೇನೆ, #ಮಾರಿಯಾ ಮತ್ತೆ ಆಡಲಿ) ನನ್ನ ಗೆಳೆಯರು ಒಟ್ಟಿಗೆ ಸೇರಿಸಿದ್ದರು. ನನ್ನ ನಾಯಿಗೆ ಈ ಎಲ್ಲ ಸಂದೇಶಗಳನ್ನು ಓದಿ ಹೇಳಿದೆ. ಆದರೆ ಅದರ ನಡಿಗೆಗಿಂತಲೂ ಈ ಸಂದೇಶಗಳು ಏಕೆ ಮುಖ್ಯ ಎಂದು ಅದಕ್ಕೆ ಅರ್ಥವಾಗಲಿಲ್ಲ.

ಈ ಸಂದರ್ಭದಲ್ಲಿ ನಿಮ್ಮನ್ನು ನನ್ನ ಅಭಿಮಾನಿಗಳು ಎಂದು ಕರೆದುಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಘೋಷಣೆಯಾದ ಕೆಲವೇ ಘಂಟೆಗಳಲ್ಲಿ ನೀವು ನಿಮ್ಮ ಬೆಂಬಲ ಮತ್ತು ನಿಯತ್ತನ್ನು ತೋರಿಸಿದಿರಿ. ಇದು ಒಬ್ಬರು ತಮ್ಮ ವೃತ್ತಿಜೀವನದ ಉನ್ನತಿಯಲ್ಲಿದ್ದಾಗ ಮಾತ್ರ ನಿರೀಕ್ಷಿಸಲು ಸಾಧ್ಯ.

ನಿಮ್ಮ ಅದ್ಭುತ ಪದಗಳು ನನ್ನ ತುಟಿಯ ಮೇಲೆ ನಗು ಮೂಡಿಸಿದವು ಎಂದು ನಿಮಗೆ ಹೇಳಬಯಸುತ್ತೇನೆ. ನಾನು ಮತ್ತೆ ಆಡಬಯಸುತ್ತೇನೆ ಮತ್ತು ಅದಕ್ಕೆ ಅವಕಾಶವಿದೆ ಎಂದು ನಂಬುತ್ತೇನೆ. ನಿಮ್ಮ ಸಂದೇಶಗಳು ನನಗೆ ದೊಡ್ಡ ಧೈರ್ಯ ತಂದುಕೊಟ್ಟಿವೆ. ಈ ಪ್ರತಿಕ್ರಿಯೆ ನಿಮಗೆ ಧನ್ಯವಾದ ಹೇಳುವುದಕ್ಕಷ್ಟೇ ಬಿಟ್ಟರೆ ಮತ್ತೇನಿಲ್ಲ. ಧನ್ಯವಾದಗಳು.

-ಮಾರಿಯಾ ಶರಪೋವಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com