
ಮುಂಬೈ: ಭಾರತ - ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹೇಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಎರಡು ದೇಶಗಳ ಜನಸಾಮಾನ್ಯರಲ್ಲಿ ಈ ರೀತಿ ಇಲ್ಲ, ನಿಜವಾಗಿ ಹೇಳಬೇಕೆಂದರೆ ಕ್ರೀಡಾಳುಗಳು ಉಭಯ ದೇಶಗಳ ಸಂಬಂಧವನ್ನು ಸುಧಾರಿಸಬಹುದು ಎಂಬ ಮಾತು ಇದೆ.
ಇದೇ ವಿಷಯವನ್ನು ಇಟ್ಟುಕೊಂಡು ನೆಸ್ಲೆ ಎವ್ರಿಡೇ ಕಂಪೆನಿಯ ಟಿವಿ ಜಾಹೀರಾತನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗಿದೆ. ಅದೂ ಎರಡೂ ದೇಶಗಳ ಜನಪ್ರಿಯ ಕ್ರೀಡಾ ದಂಪತಿಗಳ ಮೂಲಕ. ಆ ಜಾಹೀರಾತು ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಆಕೆಯ ಪಾಕ್ ಕ್ರಿಕೆಟ್ ಆಟಗಾರ ಪತಿ ಶೋಯಿಬ್ ಮಲಿಕ್ ಅವರನ್ನು ಇಟ್ಟುಕೊಂಡು ನೆಸ್ಲೆ ಟಿವಿ ಜಾಹೀರಾತು ಸಿದ್ಧಪಡಿಸಿದೆ.
ನಿಜ ಜೀವನದಲ್ಲಿರುವಂತೆ ಈ ಜಾಹೀರಾತು ವಿಡಿಯೋದಲ್ಲೂ ಸಾನಿಯಾ - ಮಲಿಕ್ ಪತಿ ಅನ್ಯೋನ್ಯ ದಂಪತಿಯಾಗಿದ್ದು ಇಬ್ಬರೂ ತಮ್ಮ ತಮ್ಮ ದೇಶಗಳ ಉತ್ತಮ ಸಂಗತಿಗಳನ್ನು ಹೇಳಿಕೊಂಡು ಕಿತ್ತಾಡಿಕೊಳ್ಳುತ್ತಾರೆ. ಕ್ರಿಕೆಟ್ ವಿಷಯವೂ ಬರುತ್ತದೆ. ಕೊನೆಗೆ ಬಿಸಿಬಿಸಿಯಾದ ಒಂದು ಕಪ್ ಟೀ ಕುಡಿದು ರಿಲ್ಯಾಕ್ಸ್ ಆಗಿ ರಾಜಿಯಾಗುತ್ತಾರೆ. ಭಾರತ-ಪಾಕ್ ಸಂಬಂಧ ಕೂಡ ಇಷ್ಟು ಸುಲಭವಾಗಿ ಪರಿಹಾರವಾದರೆ ಒಳ್ಳೆಯದಲ್ಲವೇ ಎಂಬುದು ಜಾಹಿರಾತಿನ ಒಟ್ಟಾರೆ ಸಾರಾಂಶ.
ಜಾಹೀರಾತು ವಿಡಿಯೋದಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡಿರುವ ಸಾನಿಯಾ - ಮಲಿಕ್ ಜೋಡಿ ಎಲ್ಲರನ್ನೂ ಸೆಳೆಯುತ್ತಾರೆ. ವಿಡಿಯೋ ನೋಡಿ ಆನಂದಿಸಿ.
Advertisement