ಇಂಡಿಯನ್‌ವೆಲ್ಸ್: ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ ಅಧಿಕ ಪ್ರಶಸ್ತಿ ಹಣ ನೀಡಬೇಕು ಎಂದು ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಒತ್ತಾಯಿಸಿದ್ದಾರೆ.
ಇಂಡಿಯನ್‌ವೆಲ್ಸ್ ಓಪನ್ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಜೊಕೊವಿಕ್ ಟೆನಿಸ್‌ನಲ್ಲಿ ಪ್ರೇಕ್ಷಕರ ಸಂಖ್ಯೆಗಳ ಅನುಪಾತದಲ್ಲಿ ಪ್ರಶಸ್ತಿ ಹಣ ತೀರ್ಮಾನಿಸುವ ರೀತಿ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುರುಷರ ಟೆನಿಸ್ ಪಂದ್ಯಗಳನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಪುರುಷ ಕ್ರೀಡಾಪಟುಗಳಿಗೆ ಹೆಚ್ಚಿಗೆ ಹಣ ನೀಡಬೇಕೆಂಬುದಕ್ಕೆ ಕಾರಣವೂ ಇದೇ ಆಗಿದೆ.
ಪ್ರೇಕ್ಷಕರ ಸಂಖ್ಯೆಯೂ, ಮಾರಾಟವಾದ ಟಿಕೆಟ್‌ನ ಸಂಖ್ಯೆಯನ್ನು ಪರಿಗಣಿಸಿ ಪ್ರಶಸ್ತಿ ಹಣವನ್ನು ನಿರ್ಧರಿಸಬೇಕಾಗಿದೆ ಎಂದು ಜೊಕೊವಿಕ್ ಅಭಿಪ್ರಾಯ ಪಟ್ಟಿದ್ದಾರೆ.
ಮಹಿಳಾ ಕ್ರೀಡಾಪಟುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಇಂಡಿಯನ್‌ವೆಲ್ಸ್ ಗಾರ್ಡನ್‌ನ ಸಿಇಒ ರೇಮಂಡ್ ಮೂರ್ ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಮಹಿಳಾ ಕ್ರೀಡಾಪಟುಗಳಿಗಿಂತ ನಮಗೆ ಹೆಚ್ಚಿನ ಪ್ರತಿಫಲ ನೀಡಬೇಕೆಂದು ವಿಶ್ವದ ನಂ. 1 ಆಟಗಾರ ಜೊಕೊವಿಕ್ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.