'ಆನಂದ್' ಇಲ್ಲದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗಾಗಿರುವ ಅರ್ಹತಾ ಸುತ್ತಿನಲ್ಲಿ ಹಾಲೆಂಡ್‌ನ ಅನೀಶ್ ಗಿರಿ ಮತ್ತು ವಿಶ್ವನಾಥನ್ ಆನಂದ್ ನಡುವಿನ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದೆ.
ವಿಶ್ವನಾಥನ್ ಆನಂದ್ -ಅನೀಶ್ ಗಿರಿ
ವಿಶ್ವನಾಥನ್ ಆನಂದ್ -ಅನೀಶ್ ಗಿರಿ
ಮೋಸ್ಕೋ: ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗಾಗಿರುವ ಅರ್ಹತಾ ಸುತ್ತಿನಲ್ಲಿ ಹಾಲೆಂಡ್‌ನ ಅನೀಶ್ ಗಿರಿ ಮತ್ತು ವಿಶ್ವನಾಥನ್ ಆನಂದ್ ನಡುವಿನ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಡ್ರಾ ಮೂಲಕ ಅಂತ್ಯಗೊಂಡಿರುವುದರಿಂದ ಈ ಬಾರಿಯ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಆನಂದ್ ಅರ್ಹತೆ ಪಡೆದಿಲ್ಲ.
10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆನಂದ್ ಇಲ್ಲದೇ ಇರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯಲಿದೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಆನಂದ್ 5 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದರು. 
ಆ ಅರ್ಹತಾ ಸುತ್ತು ಆನಂದ್‌ಗೆ ನಿರ್ಣಾಯಕವಾಗಿದ್ದು, ಇಲ್ಲಿ ಆನಂದ್ ಗೆಲ್ಲಲೇ ಬೇಕಿತ್ತು. ಆದರ ಪಂದ್ಯವನ್ನು ಡ್ರಾ ಮಾಡುವ ಮೂಲಕ 13ನೇ ಸುತ್ತಿನಲ್ಲಿಯೇ ಆನಂದ್ ಔಟ್ ಆಗಿದ್ದಾರೆ. 
ಹದಿಮೂರನೇ ಸುತ್ತು ಮುಗಿದ ನಂತರ ಚೆಸ್ ಪಟುಗಳು ಗಳಿಸಿದ ಅಂಕ ಪಟ್ಟಿ ಇಂತಿದೆ.
ಸರ್ಜೇ ಕರ್ಜಾಕಿನ್ -   7.5/13
ಫಾಬಿನೋ ಕರೌನಾ - 7.5/13
ವಿಶ್ವನಾಥನ್ ಆನಂದ್-  7.0/13
ಪೀಟರ್ ಸ್ವಿಡ್ಲೆರ್ -6.5 /13
ಲೆವೋನ್ ಅರೋನಿಯನ್   -6.5/13
ಅನೀಶ್ ಗಿರಿ - 6.5/13
ಹಿಕಾರು ನಕಾಮುರಾ- 6.5 /13
ವೇಸಲನ್ ಟೋಪ್‌ಲಾವ್- /13

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com