ಭಗ್ನವಾಯ್ತು ಮೇರಿಕೋಮ್ ಒಲಂಪಿಕ್ಸ್ ಕನಸು

ಐದು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ಎಂ.ಸಿ. ಮೇರಿಕೋಮ್‌ ಅವರ ರಿಯೊ ಒಲಿಂಪಿಕ್ಸ್‌ ಅರ್ಹತೆಯ ಕನಸು ನುಚ್ಚುನೂರಾಗಿದೆ....
ಮೇರಿಕೋಮ್
ಮೇರಿಕೋಮ್

ಕಜಕಸ್ತಾನ: ಐದು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ಎಂ.ಸಿ. ಮೇರಿಕೋಮ್‌ ಅವರ ರಿಯೊ ಒಲಿಂಪಿಕ್ಸ್‌ ಅರ್ಹತೆಯ ಕನಸು  ನುಚ್ಚುನೂರಾಗಿದೆ.

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಷಿಪ್‌ನ ಎರಡನೇ ಸುತ್ತಿನಲ್ಲಿ ಸೋಲು ಕಂಡಿರುವ ಮೇರಿ ಪದಕದ ಆಸೆಯನ್ನೂ ಕೈ ಚೆಲ್ಲಿದ್ದಾರೆ. ಮಹಿಳೆಯರ 51 ಕೆ.ಜಿ. ವಿಭಾಗದ ಎರಡನೇ ಸುತ್ತಿನ ಪೈಪೋಟಿ ಯಲ್ಲಿ ಮೇರಿ  0–2ರಲ್ಲಿ ಜರ್ಮನಿಯ ಅಜಿಜೆ ನಿಮಾನಿ ಎದುರು ಪರಾಜಯಗೊಂಡರು. ಮೇರಿ  ಸತತ ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಿದ್ದರೆ  ಈ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವುದು ಅಗತ್ಯವಾಗಿತ್ತು.

ಆರಂಭದ ಎರಡು ನಿಮಿಷಗಳಲ್ಲಿ  ಆಕ್ರಮಣ ಕಾರಿ ಆಟ ಆಡಿ ಮೇರಿಕೋಮ್ ಗಮನ ಸೆಳೆದರು. ಎದುರಾಳಿಯ ಮುಖ ಮತ್ತು ದವಡೆಗೆ ಬಲಿಷ್ಠ ಪಂಚ್‌ಗಳನ್ನು ಮಾಡುವ ಮೂಲಕ ಪಾಯಿಂಟ್ಸ್‌ ಬೇಟೆಗೆ ಮುನ್ನುಡಿ ಬರೆದರು. ಆ ನಂತರ ಜರ್ಮನಿಯ ಅಜಿಜೆ, ವೇಗದ ಪಂಚ್‌ಗಳಿಂದ ಮೇರಿ ಅವರ ಮುಖದಲ್ಲಿ ಬೆವರಿಳಿಸಿದರು.

ಎರಡನೇ ಸುತ್ತಿನಲ್ಲಿ ಮತ್ತೆ ಲಯ ಕಂಡುಕೊಂಡ ಮೇರಿ,  ಶುರುವಿನಲ್ಲಿ ಎದುರಾಳಿಯ ಹೊಟ್ಟೆ ಮತ್ತು ತಲೆಗೆ ಶಕ್ತಿಯುತ ಗುದ್ದುಗಳನ್ನು ನೀಡಿ ತಿರು ಗೇಟು ನೀಡುವ ಸೂಚನೆ ನೀಡಿದ್ದರು.

ಆದರೆ ಜರ್ಮನಿಯ ಬಾಕ್ಸರ್‌ ರಕ್ಷಣಾತ್ಮಕ ಆಟದ ಮೊರೆ ಹೋದರಲ್ಲದೆ ಅವಕಾಶ ಸಿಕ್ಕಾಗಲೆಲ್ಲಾ ಬಿರುಸಿನ ಪಂಚ್‌ಗಳನ್ನು ಮಾಡಿ ಮೇರಿ ಗೆಲುವಿನ ಆಸೆಗೆ ಅಡ್ಡಿಯಾದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ  ಎಲ್‌. ಸರಿತಾ ದೇವಿ ಕೂಡಾ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com